Home » ಕೊಲೆ ಕೃತ್ಯದ ಹಿನ್ನೆಲೆ, ದಕ್ಷಿಣ ಕನ್ನಡದ ಈ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ

ಕೊಲೆ ಕೃತ್ಯದ ಹಿನ್ನೆಲೆ, ದಕ್ಷಿಣ ಕನ್ನಡದ ಈ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ

0 comments

ಕರಾವಳಿಯ ಈ ಎಲ್ಲಾ ಪ್ರದೇಶಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಿನ್ನೆ ಗುರುವಾರ ರಾತ್ರಿ ನಡೆದ ಕೊಲೆ ಕೃತ್ಯದ ಹಿನ್ನೆಲೆಯಲ್ಲಿ ಸುರತ್ಕಲ್ ಮುಲ್ಕಿ ಬಜ್ಪೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ದಕ್ಷಿಣ ಕನ್ನಡ ಪೊಲೀಸ್ ಕಮಿಷನರ್ ಅವರ ಮನವಿಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಕುಮಾರ್ ಅವರು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ನಿನ್ನೆ ತಡರಾತ್ರಿ ಜಿಲ್ಲಾಧಿಕಾರಿಯವರಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಹೊರಡಿಸಲಾಗಿದೆ.

You may also like

Leave a Comment