Home » ಶಿವಮೊಗ್ಗ : ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಮಾರಣಾಂತಿಕ ಹಲ್ಲೆ !

ಶಿವಮೊಗ್ಗ : ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಮಾರಣಾಂತಿಕ ಹಲ್ಲೆ !

0 comments

ರಾಜ್ಯದಲ್ಲೇ ಭಾರೀ ಸಂಚಲನ ಮೂಡಿಸಿದ್ದ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣ ಇನ್ನೂ ಮಾಸಿಲ್ಲ. ಇದಕ್ಕೂ ಮುನ್ನವೇ ನಗರದಲ್ಲಿ ಅನ್ಯಕೋಮಿನ ಯುವಕರು ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ನಗರದ ನ್ಯೂ ಮಂಡ್ಲಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮಧು (21) ಎಂಬ ಯುವಕನ ಮೇಲೆ ಅನ್ಯಕೋಮಿನ 6 ಯುವಕರ ತಂಡ ಹಲ್ಲೆ ನಡೆಸಿದ್ದಾರೆ.

ಮಧು ಹೂವಿನ ವ್ಯಾಪಾರಿಯಾಗಿದ್ದು, ಮಂಡ್ಲಿ ಬಡಾವಣೆಯಲ್ಲಿ ಹೂವು ವಿತರಣೆಗೆ ಹೋಗಿದ್ದ ಸಂದರ್ಭದಲ್ಲಿ ಲಾಂಗು-ಮಚ್ಚು ಝಳಪಿಸುತ್ತ ಓಡಿಸಿಕೊಂಡು ಬಂದ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ.

ಮೊದಲೇ ಕಿಡ್ನಿ ಆಪರೇಷನ್ ಮಾಡಿಕೊಂಡಿರುವ ಯುವಕ ಮಧುಗೆ, ಕಿಡ್ನಿ ಆಪರೇಷನ್ ಜಾಗದಲ್ಲಿಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.

ಗಾಯಾಳು ಮಧುವನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಹಿಂದೂಪರ ಸಂಘಟನೆ ಮುಖಂಡರ ಆಗ್ರಹ ಮಾಡಿದ್ದಾರೆ.

You may also like

Leave a Comment