Home » ಸುಳ್ಯ : ಅಮಲಿಗಾಗಿ ಫೆವಿಕಾಲ್ ವಾಸನೆ ಸೇವಿಸುತ್ತಿದ್ದ ಮೂವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಸುಳ್ಯ : ಅಮಲಿಗಾಗಿ ಫೆವಿಕಾಲ್ ವಾಸನೆ ಸೇವಿಸುತ್ತಿದ್ದ ಮೂವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

by Praveen Chennavara
0 comments

ಸುಳ್ಯ: ಸುಳ್ಯದ ಜಯನಗರ ಎಂಬಲ್ಲಿ ಮನೆಯೊಂದರಲ್ಲಿ ಮೂವರು ಬಾಲಕರು ಫೆವಿಕಲ್ ಗಮ್ ವಾಸನೆ ಸೇವನೆ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳಿಯರು ಬಾಲಕರನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ ಘಟನೆ ಬಗ್ಗೆ ವರದಿಯಾಗಿದೆ.

ಅಮಲಿಗಾಗಿ ಅಪ್ರಾಪ್ತ ಬಾಲಕರು ಮಾದಕ ನಶೆಯ ಮೊರೆ ಹೋಗಿದ್ದಾರೆಂದು ಹೇಳಲಾಗುತ್ತಿದ್ದು, ಬಾಲಕರನ್ನು ವಿಚಾರಣೆ ಮಾಡಿದ ಪೊಲೀಸರು ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿ ತಿಳಿಹೇಳಿ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment