Home » ಸುಳ್ಯ:ರಬ್ಬರ್ ಗೆ ಬಳಸುವ ಆ್ಯಸಿಡ್ ಕುಡಿದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು

ಸುಳ್ಯ:ರಬ್ಬರ್ ಗೆ ಬಳಸುವ ಆ್ಯಸಿಡ್ ಕುಡಿದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು

0 comments

ಸುಳ್ಯ:ಆ್ಯಸಿಡ್ ಸೇವಿಸಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕಿನ ಮರ್ಕಂಜ ರೆಂಜಾಳ ನಿವಾಸಿ ಜಗದೀಶ್(28) ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ರಬ್ಬರ್ ಗೆ ಬಳಸುವ ಆ್ಯಸಿಡ್ ನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು.

ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮನೆಯವರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment