Home » ಸುರತ್ಕಲ್: ಎರಡು ವರ್ಷದ ಮಗುವಿನೊಂದಿಗೆ ಮನೆ ಬಿಟ್ಟು ನಾಪತ್ತೆಯಾದ ಮಹಿಳೆ!! ಠಾಣೆಯಲ್ಲಿ ಪ್ರಕರಣ ದಾಖಲು-ಪತ್ತೆಗೆ ಮನವಿ

ಸುರತ್ಕಲ್: ಎರಡು ವರ್ಷದ ಮಗುವಿನೊಂದಿಗೆ ಮನೆ ಬಿಟ್ಟು ನಾಪತ್ತೆಯಾದ ಮಹಿಳೆ!! ಠಾಣೆಯಲ್ಲಿ ಪ್ರಕರಣ ದಾಖಲು-ಪತ್ತೆಗೆ ಮನವಿ

0 comments

ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಪತ್ನಿಗೆ ಪತಿ ಬುದ್ಧಿ ಹೇಳಿದ್ದ ಕಾರಣಕ್ಕಾಗಿ ತನ್ನ ಎರಡು ವರ್ಷದ ಮಗುವಿನೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ತಡಂಬೈಲು ಎಂಬಲ್ಲಿ ಏಪ್ರಿಲ್ 11 ರಂದು ನಡೆದಿದೆ.

ನಾಪತ್ತೆಯಾದ ಮಹಿಳೆಯನ್ನು ಮೇಘ ಯಾನೆ ಬಾಲಮ್ಮ(22) ಹಾಗೂ ಆಕೆಯ ಎರಡು ವರ್ಷದ ಗಂಡು ಮಗು ಎಂದು ಗುರುತಿಸಲಾಗಿದೆ. ಮೂಲತಃ ಗದಗ ಜಿಲ್ಲೆಯವರಾದ ಮಹಿಳೆಯ ಕುಟುಂಬ ಕೆಲಸದ ನಿಮಿತ್ತ ಮಂಗಳೂರು ಹೊರವಲಯದ ಸುರತ್ಕಲ್ ನ ತಡಂಬೈಲು ಎಂಬಲ್ಲಿ ವಾಸ್ತವ್ಯ ಹೂಡಿದ್ದರು.

ಮಹಿಳೆಯು ಅತಿಯಾಗಿ ಮೊಬೈಲ್ ಬಳಸುತ್ತಿದ್ದೂ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಇದನ್ನು ಪ್ರಶ್ನಿಸಿದ್ದ ಮಹಿಳೆಯ ಪತಿಯು ಬುದ್ಧಿ ಮಾತು ಹೇಳಿದ್ದು, ಇದರಿಂದ ಕೋಪಗೊಂಡ ಮಹಿಳೆ ತನ್ನ ಮಗನೊಂದಿಗೆ ಮನೆ ಬಿಟ್ಟು ನಾಪತ್ತೆಯಾಗಿದ್ದಾರೆ ಎಂದು ಮಹಿಳೆಯ ಪತಿ ಸುರತ್ಕಲ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮಹಿಳೆಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

You may also like

Leave a Comment