8
Udupi: ತುಳುನಾಡಿನ ನಾಡು ನುಡಿಯ ಪರಂಪರೆಯ ರಕ್ಷಣೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿರುವ ಪಾರಂಪರಿಕ ನಾಟಿ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು ಅವರು ತುಳುವ ಮಹಾಸಭೆ ಉಡುಪಿ (Udupi) ತಾಲೂಕು ಘಟಕದ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.
ವಿಶ್ವನಾಥ ಆಚಾರ್ಯ ಅವರು ಆರ್.ಎಚ್.ಪಿ. ಆಯುರ್ವೇದ ಪೆರ್ಡೂರು ಸಂಸ್ಥೆಯ ಮಾಲಕರು ಹಾಗೂ ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ (ರಿ.) ಇದರ ಅಜೀವ ಸದಸ್ಯರಾಗಿದ್ದು, ತುಳು ನಾಡುನೆಲದ ಪಾರಂಪರಿಕ ಮರ್ಮಚಿಕಿತ್ಸಾ ಪರಂಪರೆಯನ್ನು ಮುಂದುವರಿಸುತ್ತಿರುವ ಪ್ರಮುಖ ನಾಟಿ ವೈದ್ಯರಲ್ಲಿ ಒಬ್ಬರು. ತುಳು ಸಾಂಸ್ಕೃತಿಕ ಸಂಘಟಕ ಎಂಬ ನಿಟ್ಟಿನಲ್ಲಿ ಅನೇಕ ಪ್ರಾದೇಶಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಅವರು ಶ್ರೀ ಕ್ಷೇತ್ರ ವರ್ತೆ ಕಲ್ಕುಡ ತೂಕತ್ತೆರಿ ದೈವಸ್ಥಾನ ಕೈರು ಪೆರ್ಡೂರು ಇದರ ಆಡಳಿತ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: Sullia: ಸುಳ್ಯ ತಾಲೂಕು ತುಳುವ ಮಹಾಸಭೆಗೆ ಸಾಮಾಜಿಕ ನಾಯಕ ಮಿಲನ್ ಗೌಡ ಬಾಳಿಕಳ ಸಂಚಾಲಕರಾಗಿ ಆಯ್ಕೆ
