Home » ಉಳ್ಳಾಲ : ಪ್ರಸಿದ್ಧ ಕೋರಿಯೋಗ್ರಾಫರ್ ನಿಧನ!

ಉಳ್ಳಾಲ : ಪ್ರಸಿದ್ಧ ಕೋರಿಯೋಗ್ರಾಫರ್ ನಿಧನ!

0 comments

ಉಳ್ಳಾಲ : ಪ್ರಸಿದ್ಧ ಕೋರಿಯೋಗ್ರಾಫರ್ ಎಂದು ಖ್ಯಾತಿ ಪಡೆದಿದ್ದ ಮಂಗಳೂರು ಹೊರವಲಯದ ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ರೋಷನ್ ಡಿ’ಸೋಜಾ ( 48) ಅವರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ತೊಂಭತ್ತರ ದಶಕದಲ್ಲೇ ಕರಾವಳಿಯಲ್ಲಿ ಅವರು ಟಾಪ್ ಈಗಲೈಸ್ ನೃತ್ಯ ತಂಡ ಕಟ್ಟಿ ಕರ್ನಾಟಕ ಮಾತ್ರವಲ್ಲದೇ ಮುಂಬಯಿ, ಗೋವಾದಲ್ಲಿ ನೃತ್ಯ ಪ್ರದರ್ಶನ ನೀಡಿ ಪ್ರಸಿದ್ಧಿಯನ್ನು ಪಡೆದಿದ್ದರು.

ರೋಷನ್ ಡಿಸೋಜಾ ಅವರು ಕರಾವಳಿಯ ಆರಾಧ್ಯ ಸ್ವಾಮಿ ಕೊರಗಜ್ಜನ ಅಪ್ರತಿಮ ಭಕ್ತರಾಗಿದ್ದರು. ಮೃತರು ಅವಿವಾಹಿತರಾಗಿದ್ದು ತಾಯಿ ಇಬ್ಬರು ಸಹೋದರರನ್ನು ಅಗಲಿದ್ದಾರೆ.

You may also like

Leave a Comment