Home » ಉಳ್ಳಾಲ : ನೆಂಟರ ಮನೆಗೆ ಬಂದಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ|

ಉಳ್ಳಾಲ : ನೆಂಟರ ಮನೆಗೆ ಬಂದಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ|

0 comments

ಉಳ್ಳಾಲ : ಪಿಲಾರು ಜಾತ್ರಾ ಮಹೋತ್ಸವಕ್ಕೆಂದು ದೊಡ್ಡಮ್ಮನ ಮನೆಗೆ ಬಂದಿದ್ದ ಯುವಕನೊಬ್ಬ ಕೋಣೆಯಲ್ಲಿ ಮಲಗುವುದಾಗಿ ಹೇಳಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನದ ಉಳ್ಳಾಲ ಠಾಣೆ ವ್ಯಾಪ್ತಿಯ ಪ್ರಕಾಶ್ ನಗರದಲ್ಲಿ ನಡೆದಿದೆ.

ಮಂಗಳೂರು ಪಡೀಲು ನಿವಾಸಿ ಸೌರವ್ ( 21) ಆತ್ಮಹತ್ಯೆಗೈದ ಯುವಕ.

ಪಿಲಾರು ಪ್ರಕಾಶ್ ನಗರದ ಸುಜಾತ ಅವರ ಮನೆಗೆ ಪಡೀಲಿನ ತಂಗಿಯ ಮಗ ಸೌರವ್ ನಿನ್ನೆ ಬೆಳಗ್ಗೆ ಬಂದಿದ್ದ. ನಂತರ ಜಾತ್ರೆಗೆ ತೆರಳಿ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ನಿದ್ದೆ ಬರುತ್ತದೆ ಎಂದು ಹೇಳಿ ಕೋಣೆಗೆ ಹೋಗಿದ್ದಾನೆ. ಸಂಜೆ ಆದಾಗ ಸೌರವ್ ತಾಯಿ ಮಗನನ್ನು ಎಬ್ಬಿಸಲು ಹೋದಾಗ ಸೌರವ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮೃತ ಸೌರವ್ ತಂದೆ ತಾಯಿ ಸಹೋದರ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ಆತ್ಮಹತ್ಯೆಗೆ ಕಾರಣವೇನೆಂದು ಪೊಲೀಸ್ ತನಿಖೆ ನಡೆಸುತ್ತಿದ್ದಾರೆ.

You may also like

Leave a Comment