Home » ವಿಟ್ಲ : ಮರಕ್ಕೆ ಡಿಕ್ಕಿ ಹೊಡೆದ ಕಾರು | ಓರ್ವ ಗಂಭೀರ| ಇಬ್ಬರಿಗೆ ಗಾಯ

ವಿಟ್ಲ : ಮರಕ್ಕೆ ಡಿಕ್ಕಿ ಹೊಡೆದ ಕಾರು | ಓರ್ವ ಗಂಭೀರ| ಇಬ್ಬರಿಗೆ ಗಾಯ

0 comments

ವಿಟ್ಲ : ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಓರ್ವ ಗಂಭೀರವಾಗಿ ಗಾಯಗೊಂಡು, ಉಳಿದ ಇಬ್ಬರಿಗೆ ಗಾಯವಾದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.

ಜಟಧಾರಿ ದೈವಸ್ಥಾನದ ಎದುರು ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರು ವಿಟ್ಲ ಬಸ್ಟ್ಯಾಂಡ್ ಕಡೆಯಿಂದ ಬರುತ್ತಿತ್ತು. ಕಾರಿನಲ್ಲಿ ಕೇರಳ ಮೂಲದ ಮೂವರಿದ್ದರು. ಅದರಲ್ಲಿ ಇಬ್ಬರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ಕಾರಿನಲ್ಲಿದ್ದವರು ಕುಡಿತದ ಅಮಲಿನಲ್ಲಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಇದಕ್ಕೂ ಮೊದಲು ಇದೇ ಕಾರು ದ್ವಿಚಕ್ರ ವಾಹನ ಮತ್ತು ಒಂದು ಕಾರಿಗೆ ಡಿಕ್ಕಿ ಹೊಡೆದಿತ್ತು.

You may also like

Leave a Comment