Home » ವಿಟ್ಲ : ಕುಡಿದ ಮತ್ತಿನಲ್ಲಿ ಕತ್ತಿಯಿಂದ ಕಡಿತ!! ಓರ್ವನ ಸ್ಥಿತಿ ಗಂಭೀರ

ವಿಟ್ಲ : ಕುಡಿದ ಮತ್ತಿನಲ್ಲಿ ಕತ್ತಿಯಿಂದ ಕಡಿತ!! ಓರ್ವನ ಸ್ಥಿತಿ ಗಂಭೀರ

0 comments

ವಿಟ್ಲ: ಕುಡಿತದ ಅಮಲಿನಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಮಾತಿಗೆ ಮಾತು ಬೆಳೆದು ಕತ್ತಿಯಿಂದ ಹಲ್ಲೆಗೈದ ಘಟನೆ ಅಡ್ಯನಡ್ಕದ ಪುಣಚ ಸೊಸೈಟಿ ಮುಂಭಾಗದಲ್ಲಿ ನಡೆದಿದೆ.

ಹಲ್ಲೆಯಿಂದ ಗಾಯಗೊಂಡವರನ್ನು ಕೊಳ್ಳಪದವು ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ.

ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ದಿನೇಶ್ ಎಂಬುವವರಿಗೆ ವ್ಯಕ್ತಿಯೊಬ್ಬರು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಸದ್ಯ ಗಂಭೀರ ಗಾಯಗೊಂಡಿರುವ ದಿನೇಶ್ ನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕತ್ತಿಯಿಂದ ಹಲ್ಲೆ ನಡೆಸಿದವರ ಮಾಹಿತಿ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.

You may also like

Leave a Comment