Home » ನಟ ಚೇತನ್ ಗೆ ಷರತ್ತುಬದ್ಧ ಜಾಮೀನು ನೀಡಿದ ನ್ಯಾಯಾಲಯ!

ನಟ ಚೇತನ್ ಗೆ ಷರತ್ತುಬದ್ಧ ಜಾಮೀನು ನೀಡಿದ ನ್ಯಾಯಾಲಯ!

0 comments

ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ನಟ ಚೇತನ್ ಅಹಿಂಸಾ ಅವರು ಇತ್ತೀಚೆಗೆ ಆಕ್ಷೇಪಾರ್ಹ ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದ್ದರು. ಹಾಗಾಗಿ ಫೆ.22 ರಂದು ಚೇತನ್ ರನ್ನು ಬಂಧಿಸಿ ಬುಧವಾರ ( ಫೆ.23) 8 ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ಚೇತನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿತ್ತು.

ಈಗ 32 ನೇ ಎಸಿಎಂಎಂ ನ್ಯಾಯಾಲಯದಿಂದ ಚೇತನ್ ಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಒಂದು ಲಕ್ಷ ರೂ.ಬಾಂಡ್ ಕೊಡಬೇಕು. ಇಬ್ಬರ ಶ್ಯೂರಿಟಿ ಹಾಕಬೇಕು. ಪೊಲೀಸರು ನಡೆಸುವ ತನಿಖೆಗೆ ಸಹಕರಿಸಬೇಕು ಎಂಬುದು ಷರತ್ತಿನಲ್ಲಿದೆ.

You may also like

Leave a Comment