Home » Bangalore News: ಗಂಡನ ತೂಕದಿಂದ ಹೆಂಡತಿ ಕಾಲು ಮುರಿತ! ಪತಿಯ ವಿರುದ್ಧ ದೂರು ದಾಖಲಿಸಿದ ಪತ್ನಿ!!!

Bangalore News: ಗಂಡನ ತೂಕದಿಂದ ಹೆಂಡತಿ ಕಾಲು ಮುರಿತ! ಪತಿಯ ವಿರುದ್ಧ ದೂರು ದಾಖಲಿಸಿದ ಪತ್ನಿ!!!

by Mallika
1 comment
Bangalore News

ಗಂಡ ಹೆಂಡತಿ ಜಗಳ ಆಗುವುದು ಸಾಮಾನ್ಯ. ಇಂತಹ ಅನೇಕ ಕೇಸುಗಳು ವರದಿಯಾಗುವ ಕುರಿತು ನಾವು ಕೇಳುತ್ತಲೇ ಇರುತ್ತೇವೆ. ಇದೀಗ ಇಲ್ಲೊಂದು ವಿಚಿತ್ರ ಘಟನೆಯೊಂದರಲ್ಲಿ ಹೆಂಡತಿ ಗಂಡನ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ. ನನ್ನ ಗಂಡನ ತೂಕ 150 ಕೆಜಿ ಇದ್ದು, ನನ್ನ ಮೇಲೆ ಕುಳಿತುಕೊಳ್ಳುತ್ತಿದ್ದ ಎಂದು ದೂರು ನೀಡಿದ್ದಾಳೆ. ಈ ಕಾರಣದಿಂದ ನನ್ನ ಕಾಲಿನ ನರ ಊತಗೊಂಡಿದೆ ಎಂದು ಹೇಳಿದ್ದಾಳೆ.

ಈ ಘಟನೆ ಕುರಿತು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚರಣ್‌ಗೌಡ, ಚೈತ್ರ ಎಂಬಿಬ್ಬರೇ ಗಂಡ ಹೆಂಡತಿ. ಇವರಿಬ್ಬರ ಮಧ್ಯೆ ಗಲಾಟೆ ನಡೆಯುತ್ತಲೇ ಇದ್ದು, ಇದೀಗ ಚೈತ್ರಾ ಠಾಣೆ ಮೆಟ್ಟಿಲೇರಿದ್ದಾಳೆ.

ಇವರಿಬ್ಬರ ಮಧ್ಯೆ ಎಷ್ಟೇ ಜಗಳವಾಡಿದರೂ ಮಾತಿಗೆ ಮಾತು ಬೆಳೆದರೂ, ಗಂಡನಾದವನು ಹೊಡೆದು ಬಡಿದು ಮಾಡುತ್ತಿರಲಿಲ್ಲ. ಆದರೆ ಪತ್ನಿಯ ಕಾಲಿನ ಮೇಲೆ ಕುಳಿತು ತನ್ನ ಕೋಪ ತೀರಿಸಿಕೊಳ್ಳುತ್ತಿದ್ದ.
2022 ರಲ್ಲಿ ಚೈತ್ರಾ ಎಂಬಾಕೆಯನ್ನು ಮದುವೆಯಾಗಿದ್ದ ಚರಣ್‌ಗೌಡ, ಮದುವೆಯಾದ ಕೆಲ ತಿಂಗಳಲ್ಲೇ ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿತ್ತು. ಆದರೆ ಒಂದೇಟೂ ಹೊಡೆಯದ ಗಂಡ ಹೋಗಿ ಆಕೆಯ ಕಾಲಿನ ಮೇಲೆ ಕುಳಿತು ಬಿಡುತ್ತಿದ್ದ. ಈ ಕಾರಣದಿಂದ ಆಕೆಯ ಕಾಲಿಗೆ ಪೆಟ್ಟಾಗಿ ಕಾಲು ಮುರಿದಿದೆ.

ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವ ಚೈತ್ರಾ ಕೆಲ ತಿಂಗಳುಗಳ ಕಾಲ ಬೆಡ್‌ರೆಸ್ಟ್‌ ತೆಗೆದುಕೊಳ್ಳಲು ಡಾಕ್ಟರ್‌ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಇತ್ತ ಪತಿಯ ವಿರುದ್ಧ ಕೋಪಗೊಂಡು ಚೈತ್ರಾ ಠಾಣೆಗೆ ತೆರಳಿ ದೂರು ನೀಡಿದ್ದು, ಪತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

You may also like

Leave a Comment