Home » Mysore Road Close : ಬೆಂಗಳೂರು ಜನರೇ ಗಮನಿಸಿ! ರಾಮವೇಣುಗೋಪಾಲ ಸ್ವಾಮಿ ರಥೋತ್ಸವದ ಹಿನ್ನೆಲೆ ಮೈಸೂರು ರಸ್ತೆ ಬಂದ್‌

Mysore Road Close : ಬೆಂಗಳೂರು ಜನರೇ ಗಮನಿಸಿ! ರಾಮವೇಣುಗೋಪಾಲ ಸ್ವಾಮಿ ರಥೋತ್ಸವದ ಹಿನ್ನೆಲೆ ಮೈಸೂರು ರಸ್ತೆ ಬಂದ್‌

0 comments
Bangalore

Bangalore : ಬೆಂಗಳೂರು ನಗರದಲ್ಲಿ ಮೈಸೂರು ರಸ್ತೆಯ ಗಾಲಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮವೇಣುಗೋಪಾಲ ಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಮೈಸೂರು ರಸ್ತೆ ಬಂದ್‌ ಮಾಡಲಾಗಿದೆ. ಇಂದಿನಿಂದ ಬೆಳಗ್ಗೆ 8 ಗಂಟೆಯಿಂದ ಏಪ್ರಿಲ್ 1 ರ ಬೆಳಗ್ಗೆ 10 ಗಂಟೆಯವರೆಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಗಳ ಗಳು ಸೇರಿದಂತೆ ಎಲ್ಲ ವಾಹನಗಳು ಮೈಸೂರು ರಸ್ತೆ ಮೂಲಕ ಬೆಂಗಳೂರು(Bangalore)ನಗರವನ್ನ ಪ್ರವೇಶಿಸುವುದನ್ನು ಮತ್ತು ನಿರ್ಗಮಿಸುವುದನ್ನು ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ.
ಬದಲಿ ಸಂಪರ್ಕ ರಸ್ತೆಗಳು ಹೀಗಿವೆ

ಮೈಸೂರು ರಸ್ತೆಯ ಹೊಸ ಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಎಡಕ್ಕೆ ಹೋಗಿ ಟಿಂಬರ್ ಯಾರ್ಡ್ ಮೂಲಕ ಮುನೇಶ್ವರ ಬ್ಲಾಕ್‌ನ 50 ಅಡಿ ರಸ್ತೆಯಲ್ಲಿ ಹೊಸಕೆರೆಹಳ್ಳಿ ಮೂಲಕ ದೇವೇಗೌಡ ವೃತ್ತಕ್ಕೆ ಬಂದು ನಾಯಂಡಹಳ್ಳಿ ಜಂಕ್ಷನ್ ಬಳಿ ಮೈಸೂರು ರಸ್ತೆಯನ್ನು ಹಾದು ಹೋಗಬೇಕಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ವಿಜಯನಗರದಿಂದ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಮತ್ತು ಬಿಎಚ್‌ಇಎಲ್ ಜಂಕ್ಷನ್‌ನಿಂದ ನಗರಕ್ಕೆ ಹೋಗುವ ವಾಹನಗಳು ಬಾಪೂಜಿ ನಗರ ಜಂಕ್ಷನ್ ಮತ್ತು ಕೆಎಸ್‌ಆರ್‌ಟಿಸಿ ಜಂಕ್ಷನ್‌ನಲ್ಲಿ ಯು-ಟರ್ನ್ ತೆಗೆದುಕೊಳ್ಳುವಂತಿಲ್ಲ.

ಬದಲಾಗಿ ಅವರು ಮೈಸೂರು ರಸ್ತೆಗೆ ಸಂಪರ್ಕಿಸಲು ಬಾಪೂಜಿ ನಗರದ ಮೇಲ್ಸೇತುವೆಯ ಮೂಲಕ ಹೋಗಬಹುದು ಮತ್ತು ಹೊಸಕೆರೆಹಳ್ಳಿ, ಬನಶಂಕರಿ, ಬ್ಯಾಟರಾಯನಪುರ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಹೊಸ ಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಬಲಕ್ಕೆ ತೆಗೆದುಕೊಂಡು 50 ಅಡಿ ರಸ್ತೆ ಮತ್ತು ದೇವೇಗೌಡ ವೃತ್ತದ ಮೂಲಕ ನಾಯಂಡಹಳ್ಳಿ ಜಂಕ್ಷನ್‌ಗೆ ತಲುಪಬಹುದು. ಹೀಗಾಗಿ ಜನರು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕಿದೆ.

You may also like

Leave a Comment