Home » ಶಾಲೆಯಲ್ಲಿ ಕ್ರೈಸ್ತ ಧರ್ಮ ಹೇರಿಕೆ ಆರೋಪ, ವಿದ್ಯಾರ್ಥಿಗಳು ಬೈಬಲ್ ಓದಲು ಕಡ್ಡಾಯ ನಿಯಮ: ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ

ಶಾಲೆಯಲ್ಲಿ ಕ್ರೈಸ್ತ ಧರ್ಮ ಹೇರಿಕೆ ಆರೋಪ, ವಿದ್ಯಾರ್ಥಿಗಳು ಬೈಬಲ್ ಓದಲು ಕಡ್ಡಾಯ ನಿಯಮ: ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ

by Mallika
0 comments

ಶಾಲೆಯಲ್ಲಿ ದಿನನಿತ್ಯ ಬೈಬಲ್ ಓದುವುದು ಕಡ್ಡಾಯಗೊಳಿಸಿರುವ ಘಟನೆಯೊಂದು ನಡೆದಿದ್ದು,
ಈ ಮೂಲಕ ವಿದ್ಯಾರ್ಥಿಗಳ ಮೇಲೆ ಕ್ರೈಸ್ತ ಧರ್ಮವನ್ನು ಹೇರಲಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಬೆಂಗಳೂರಿನ ರಿಚರ್ಡ್ ಟೌನ್‌ನಲ್ಲಿರುವ ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ನಡೆದಿದೆ. ಬೈಬಲ್ ವಿರೋಧಿಸಿದರೆ ಶಾಲೆಗೆ ದಾಖಲಾತಿ ಸಿಗುವುದಿಲ್ಲ ಎಂಬುದರ ಜೊತೆಗೆ ಶಾಲೆಯಲ್ಲಿ ಬೈಬಲ್ ಓದುವುದು ಕಡ್ಡಾಯ ಮಕ್ಕಳು ಉತ್ತಮ ನಾಗರಿಕನಾಗಲು ಬೈಬಲ್ ಕಲಿಕೆ ಮುಖ್ಯ ಬೈಬಲ್ ಕಲಿಕೆ ವಿರೋಧಿಸುವವರಿಗೆ ಶಾಲೆಯಲ್ಲಿ ಅಡ್ಮಿಷನ್ ಸಿಗುವುದಿಲ್ಲ. ದಿನನಿತ್ಯ ಬೈಬಲ್ ಓದುವುದು ಶಾಲೆಯಲ್ಲಿ ಕಡ್ಡಾಯ ಎಂದು ಆಡಳಿತ ಮಂಡಳಿ ತಿಳಿಸಿದೆ. ಆಡಳಿತ ಮಂಡಳಿಯ ನಡೆಗೆ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಆಡಳಿತ ಮಂಡಳಿಯು ಹೇರುತ್ತಿರುವ ಈ ನಿಯಮವು ಮಕ್ಕಳ ಹಕ್ಕುಗಳ ಸಂರಕ್ಷಣೆ ಅಧಿನಿಯಮ 2005 ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ.

You may also like

Leave a Comment