Home » Bengaluru: ಮುಸ್ಲಿಂ ಹುಡುಗ ಮತ್ತು ಇಡೀ ತಂಡದಿಂದ ಲವ್ ಜಿಹಾದ್ ಗೆ ಒತ್ತಾಯ ; ಆಕೆ ಕೆಲಸ ಮಾಡುವ ಸಂಸ್ಥೆಯಿಂದಲೇ ಹುನ್ನಾರ!

Bengaluru: ಮುಸ್ಲಿಂ ಹುಡುಗ ಮತ್ತು ಇಡೀ ತಂಡದಿಂದ ಲವ್ ಜಿಹಾದ್ ಗೆ ಒತ್ತಾಯ ; ಆಕೆ ಕೆಲಸ ಮಾಡುವ ಸಂಸ್ಥೆಯಿಂದಲೇ ಹುನ್ನಾರ!

0 comments
Bengaluru

Bengaluru: ಇತ್ತೀಚೆಗೆ ಲವ್ ಜಿಹಾದ್ (love jihad) ಪ್ರಕರಣ ಅಲ್ಲಲ್ಲಿ ಬೆಳಕಿಗೆ‌ ಬರುತ್ತಿದೆ. ಪ್ರೀತಿಸಿದ ಯುವತಿ ಬ್ರೇಕಪ್ (breakup) ಎಂದಳೆಂದು ಆಕೆಯನ್ನು ಕೊಂದು ಪೀಸ್ ಪೀಸ್ ಮಾಡುವುದು ಅಥವಾ ದೇಹದ ಭಾಗವನ್ನು ನಾಯಿಗಳಿಗೆ ಹಾಕುವಂತಹ ಘಟನೆಗಳು ಇತ್ತೀಚೆಗೆ ನಡೆದಿದೆ. ಇದೀಗ ಲವ್ ಜಿಹಾದ್ ಯತ್ನದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಗೆ ಕಿರುಕುಳ ನೀಡಿದ್ದು, ಲವ್ ಜಿಹಾದ್ ಯತ್ನಿಸಿರುವ ಹಿನ್ನೆಲೆ ಹಿಂದೂ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರು (Bengaluru) ನಗರದಲ್ಲಿ ನಡೆದಿದೆ.

ಹಿಂದೂ ಯುವತಿ ಮಹಾರಾಷ್ಟ್ರ ಮೂಲದವಳಾಗಿದ್ದು, ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದಾಳೆ. ಹಾಗೂ
ಯುವತಿ ಬ್ಲಾಕ್ ಬೆರಿಸ್​ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಈಕೆಗೆ ಅಸ್ಸಾಂ ಮೂಲದ ಅಲ್ ಮೆಹಪ್ಯೂಸ್ ಎಂಬಾತನ ಪರಿಚಯವಾಗಿದ್ದು, ಈತ
ಪ್ರಸ್ತುತ ಕೊರಮಂಗಲದಲ್ಲಿ ವಾಸವಿದ್ದು, ಗಾರ್ಮೆಂಟ್ಸ್ ರಿಟೇಲ್​ನಲ್ಲಿ ಕೆಲಸ ಮಾಡಿಕೊಂಡಿದ್ದಾನೆ.

ಅಲ್ ಮೆಹಪ್ಯೂಸ್ ಯುವತಿಯ ಬಳಿ ತನ್ನ ಹೆಸರು ಮೆಲ್ಬಿನ್, ತಾನೊಬ್ಬ ಕ್ರಿಶ್ಚಿಯನ್ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ಹಿಂದೂ ಯುವತಿಯೊಂದಿಗೆ ಸ್ನೇಹ-ಸಲುಗೆ ಬೆಳೆಸಿಕೊಂಡಿದ್ದಾನೆ. ಕ್ರಮೇಣ ಈ ಸ್ನೇಹ ಪ್ರೀತಿಗೆ‌ ತಿರುಗಿದೆ. ಇಬ್ಬರೂ ಪ್ರೀತಿಸಲು ಆರಂಭಿಸಿದ ನಂತರ ಒಂದು ದಿನ ಮೆಹಪ್ಯೂಸ್’ನ ಆಧಾರ್ ಕಾರ್ಡ್ ಯುವತಿಗೆ ಸಿಕ್ಕಿದ್ದು, ಅದನ್ನು ನೋಡುತ್ತಿದ್ದಂತೆ ಯುವತಿ ಬೆಚ್ಚಿಬಿದ್ದಿದ್ದಾಳೆ. ಯುವಕ ಕ್ರಿಶ್ಚಿಯನ್ ಅಲ್ಲ, ಮುಸ್ಲಿಂ ಎಂದು ಯುವತಿಗೆ ತಿಳಿಯಿತು. ಯುವಕನ ಮೋಸ ಅರಿತ ಯುವತಿ ತಕ್ಷಣವೇ ಆತನಿಗೆ ಕರೆ ಮಾಡಿ ಬ್ರೇಕಪ್ ಎಂದೇ ಬಿಟ್ಟಳು.

ಈ ಬಗ್ಗೆ ಯುವತಿ ಮನೆಯವರಿಗೆ ತಿಳಿಸಿದ್ದು, ಆತನ ಸ್ನೇಹ-ಪ್ರೀತಿ ಬೇಡ ದೂರವಿರು ಎಂದು ಮನೆಯವರು ಆಕೆಗೆ ಬುದ್ಧಿವಾದ ಹೇಳಿದರು. ಆದರೆ, ಇಷ್ಟಕ್ಕೆ ಎಲ್ಲವೂ ಸರಿ ಹೋಗಲಿಲ್ಲ. ಯುವತಿ ಬ್ರೇಕಪ್ ಎಂದಿದ್ದೇ ತಡ ಮುಸ್ಲಿಂ ಯುವಕ ಆಕೆಗೆ ಕಿರುಕುಳ ನೀಡಲಾರಂಭಿಸಿದ. ಯುವತಿಯ ಮನೆಗೆ ಬಂದು ಗಲಾಟೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾನೆ. ವಿಪರ್ಯಾಸವೆಂದರೆ ಮೆಹಪ್ಯೂಸ್ ಜೊತೆಗೆ ಯುವತಿ ಕೆಲಸ ಮಾಡುತ್ತಿದ್ದ ಕಂಪನಿಯ ಸಹೋದ್ಯೋಗಿಗಳು ಕೂಡ ಕೈಜೋಡಿಸಿದ್ದಾರೆ.

ಮುಸ್ಲಿಂ ಹುಡುಗ ಮತ್ತು ಇಡೀ ತಂಡದಿಂದ ಲವ್ ಜಿಹಾದ್ ಗೆ ಒತ್ತಾಯ ಮಾಡಿದೆ. ಆಕೆ ಕೆಲಸ ಮಾಡುವ ಸಂಸ್ಥೆಯಿಂದಲೇ ಹುನ್ನಾರ ನಡೆದಿದೆ. ಕಂಪನಿ ಆಕೆಯ ಬಳಿ ಲಕ್ಷಾಂತರ ಹಣ‌ ನೀಡುವಂತೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ಕಿರುಕುಳದಿಂದ ಮನನೊಂದ ಯುವತಿ ದಿಟ್ಟತನದಿಂದ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸದ್ಯ ಮುಸ್ಲಿಂ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: SHOCKING NEWS: 4 ನೇ ಮಹಡಿಯಿಂದ ನೇರವಾಗಿ ಮಡಿಲಿಗೆ ಬಂದು ಬಿದ್ದ ಮಗು, ಅದೃಷ್ಟ ಅಂದರೆ ಇದು !

You may also like

Leave a Comment