6
Bengaluru: ಮಹಿಳೆಯರು ಸ್ನಾನ ಮಾಡುವ ವೀಡಿಯೋ ಮಾಡಿದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಶೋಕ್ (25 ವರ್ಷ) ಎಂಬಾತನೇ ಆರೋಪಿ. ಈ ಘಟನೆ ಬೆಂಗಳೂರು (Bengaluru) ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಅಶೋಕ್ ವಾಸವಾಗಿದ್ದ ಪಿಜಿ ಮುಂದೆ ಲೇಡಿಸ್ ಪಿಜಿ ಇದ್ದು, ಈತ ಸ್ನಾನದ ಕೋಣೆಯ ವೆಂಟಿಲೇಟರ್ ಮೂಲಕ ಮಹಿಳೆಯರು ಸ್ನಾನ ಮಾಡುತ್ತಿದ್ದ ವೀಡಿಯೋ ಮಾಡುತ್ತಿದ್ದ ಎನ್ನಲಾಗಿದೆ. ಈತನ ಮೊಬೈಲ್ನಲ್ಲಿ ಏಳು ಜನರ ಸ್ನಾನದ ವೀಡಿಯೋಗಳು ಪತ್ತೆಯಾಗಿದೆ.
ಈತ ಮಹಿಳೆಯರು ಸ್ನಾನ ಮಾಡುವ ವೀಡಿಯೋ ಮಾಡುವ ಸಂದರ್ಭದಲ್ಲೇ ರೆಡ್ಹ್ಯಾಂಡ್ ಆಗಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಇವನನ್ನು ಪೊಲೀಸರ ವಶಕ್ಕೆ ನೀಡಲಾಗಿತ್ತು. ಈತ ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ಕೃತ್ಯ ಮಾಡುತ್ತಿದ್ದ ಎನ್ನಲಾಗಿದೆ. ಅಶೋಕ್ ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾದಲ್ಲಿ ಕೆಲಸ ಮಾಡುತ್ತಿದ್ದ. ಸದ್ಯಕ್ಕೆ ಈಗ ಆರೋಪಿಯನ್ನು ಬಂಧಿಸಲಾಗಿದ್ದು, ಜೈಲು ಸೇರಿದ್ದಾನೆ.
