Home » Karnataka lokayuktha raid: ಬೆಂಗಳೂರಿನ 45 ಕಂದಾಯ ಅಧಿಕಾರಿಗಳ ಕಛೇರಿ ಮೇಲೆ ಲೋಕಾಯುಕ್ತ ದಾಳಿ : ಖುದ್ದು ಫೀಲ್ಡ್‌ಗೆ ಇಳಿದ ಲೋಕಾಯುಕ್ತ ನ್ಯಾ| ಬಿ.ಎಸ್‌.ಪಾಟೀಲ್‌

Karnataka lokayuktha raid: ಬೆಂಗಳೂರಿನ 45 ಕಂದಾಯ ಅಧಿಕಾರಿಗಳ ಕಛೇರಿ ಮೇಲೆ ಲೋಕಾಯುಕ್ತ ದಾಳಿ : ಖುದ್ದು ಫೀಲ್ಡ್‌ಗೆ ಇಳಿದ ಲೋಕಾಯುಕ್ತ ನ್ಯಾ| ಬಿ.ಎಸ್‌.ಪಾಟೀಲ್‌

by Praveen Chennavara
0 comments
Karnataka lokayuktha raid

Karnataka lokayuktha raid: ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿನ 45 ಕಂದಾಯ ಅಧಿಕಾರಿಗಳ ಕಚೇರಿ ಮೇಲೆ ಏಕಕಾಲದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ದಾಳಿ(Karnataka lokayuktha raid) ನಡೆಸಿದ್ದಾರೆ.

ಕಚೇರಿಗಳಲ್ಲಿ ಕೆಲಸ ಮಾಡಿಸಿ ಕೊಡಲು ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆಯಿಡುತ್ತಿರುವ ಸರಣಿ ಆರೋಪಗಳು ಬಂದಿದ್ದರಿಂದ ಬೆಂಗಳೂರು ನಗರ ಜಿಲ್ಲೆಯ ಪದ್ಮನಾಭನಗರ, ಜಯನಗರ, ವಿಜಯನಗರ, ಬಸವನಗುಡಿ, ಬ್ಯಾಟರಾಯನಪುರ, ಯಲಹಂಕ, ವಿದ್ಯಾರಣ್ಯಪುರ,ಮಹದೇವಪುರ,ಕೆ.ಆರ್.ಪುರಂ ಸೇರಿದಂತೆ ಒಟ್ಟು 45 ಆರ್‌ಒ, ಎಆರ್‌ಒ, ಎಡಿಟಿಪಿ ಅಧಿಕಾರಿಗಳ ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ, ತಪಾಸಣೆ ನಡೆಸುತ್ತಿದ್ದಾರೆ.

45 ಸ್ಥಳಗಳಲ್ಲಿ ಇರುವ 100ಕ್ಕೂ ಅಧಿಕಾರಿಗಳ ಕಚೇರಿಗಳಿಗೆ ಏಕಕಾಲದಲ್ಲಿ ಖುದ್ದು ಲೋಕಾಯುಕ್ತ ನ್ಯಾ| ಬಿ.ಎಸ್‌.ಪಾಟೀಲ್‌ ಅವರ ನೇತೃತ್ವದಲ್ಲಿ ಉಪ ಲೋಕಾ ಯುಕ್ತ ಕೆ.ಎನ್‌. ಫ‌ಣೀಂದ್ರ, ಡಿಜಿಪಿ
ಪ್ರಶಾಂತ್‌ ಕುಮಾರ್‌ ಠಾಕೂರ್‌, ಐಜಿಪಿ ಡಾ| ಎ. ಸುಬ್ರಹ್ಮಣ್ಯೇಶ್ವರ ರಾವ್‌ ದಾಳಿ ನಡೆಸಲಾಗಿದೆ.

ಸ್ಥಳದಿಂದ ಕೆಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಕೆಲವು ಕಚೇರಿಗಳಲ್ಲಿ ಸಾರ್ವಜನಿಕರಿಂದ ಲಂಚದ ರೂಪದಲ್ಲಿ ಪಡೆದಿದ್ದಾರೆ ಎನ್ನಲಾದ ಕಂತೆ – ಕಂತೆ ನೋಟುಗಳು ಪತ್ತೆಯಾಗಿವೆ. ನಿಗದಿತ ಸಮಯದಲ್ಲಿ ಕಡತ ವಿಲೇವಾರಿ ಮಾಡದಿರುವುದು, ಫ‌ಲಾನುಭವಿಗಳಿಗೆ ವಿವಿಧ ನೆಪವೊಡ್ಡಿ ಸೂಕ್ತ ರೀತಿಯಲ್ಲಿ ಕೆಲಸ ಮಾಡದಿರುವುದು, ದಾಖಲೆಗಳ ನಿರ್ವಹಣೆ ವೈಫ‌ಲ್ಯ ಸಹಿತ ಹಲವು ಅವ್ಯವಹಾರಗಳು ಹಾಗೂ ಲೋಪದೋಷಗಳು ಪತ್ತೆಯಾಗಿವೆ.

ನ್ಯಾ| ಬಿ.ಎಸ್‌.ಪಾಟೀಲ್‌ ರಾಜಾಜಿನಗರದ ಕಂದಾಯ ಕಚೇರಿಗೆ ಭೇಟಿ ಕೊಟ್ಟ ವೇಳೆ ಅಧಿಕಾರಿ ಭಾರತಿ ಬಳಿ ಕಡತ ವಿಲೇವಾರಿಗೆ ತಡಮಾಡಿರುವುದನ್ನು ಪ್ರಶ್ನಿಸಿದರು. ಕ್ಯಾಶ್‌ ಡಿಕ್ಲರೇಷನ್‌ ಬುಕ್‌ ಬಗ್ಗೆ ಮಾಹಿತಿ ಕೊಡುವಂತೆ ಸೂಚಿಸಿದಾಗ ಅಲ್ಲಿನ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಕೈ ಕಟ್ಟಿ ನಿಂತರು. ಅಧಿಕಾರಿಗಳ ಗೊಂದಲದ ಹೇಳಿಕೆಗೆ ಲೋಕಾಯುಕ್ತರು ಗರಂ ಆದರು. ಖುದ್ದು ಅರ್ಜಿದಾರರಿಗೆ ಕರೆ ಮಾಡಿ ತಾವು ಸಲ್ಲಿಸಿರುವ ಅರ್ಜಿಗಳಿಗೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸಿದ್ದಾರೆ? ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆಯೇ ಮುಂತಾಗಿ ಪ್ರಶ್ನಿಸಿದರು. ವಿಜಯನಗರ, ಬ್ಯಾಟರಾಯನಪುರದ ಗಾಳಿ ಆಂಜನೇಯ ಸ್ವಾಮಿ ದೇವಾಲಯ ಉಪ ವಿಭಾಗಗಳಲ್ಲೂ ಕಂದಾಯ ಉಪ ವಿಭಾಗ ಕಚೇರಿಯ ಅಧಿಕಾರಿ, ಸಿಬಂದಿಗೆ ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಕ್ರೀಡಾಕೂಟದಲ್ಲಿ ಗೆದ್ದು ಬಹುಮಾನ ಸ್ವೀಕರಿಸುವ ಮುನ್ನವೇ ಹೃದಯಾಘಾತದಿಂದ ವಿದ್ಯಾರ್ಥಿ ಸಾವು

You may also like