ಸಣ್ಣದೊಂದು ಕನಸು ದೊಡ್ಡ ಯೋಚನೆಮೂಲಕ ಚಿಕ್ಕ ತಂಡದೊಂದಿಗೆ ನಿಮ್ಮ ಮುಂದೆ ಕರಾವಳಿ ಸಿರಿ ಕ್ಲಬ್ ಬೆಂಗಳೂರು ಎನ್ನುವ ನಾಮ-ಧ್ಯೇಯದೊಂದಿಗೆ…,
ಕೀರ್ತಿ ಸಂಪಾದಿಸುವ ಯೋಚನೆ ನಮ್ಮದಲ್ಲ , ಆಸೆ ಆಕಾಂಕ್ಷೆಗಳನ್ನ ಹೊತ್ತು ಬರುವ ತಂಡ ನಮ್ಮದಲ್ಲ ….
ಉದ್ದೇಶ ಹಾಗೂ ಯೋಜನೆ ಇಂತಿವೆ…
1)ಸಂಘಟನೆ ಮೂಲಕ ಬಲಯುತಾರಾಗಿ ಸಮಾಜದಲ್ಲಿರುವ ದುರ್ಬಲರಿಗೆ ಆರ್ಥಿಕ ಸಹಾಯ
2) ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಯಾಗುವುದು
3) ಶ್ರೇಷ್ಠ ದಾನದಲ್ಲಿ ಒಂದಾದ ರಕ್ತದಾನ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಈ ಯೋಜನೆಗೆ ಕರಾವಳಿ ರಕ್ತನಿಧಿ ಸ್ಥಾಪಿಸಿ ಈಗಾಗಲೇ ಚಾಲ್ತಿಯಲ್ಲಿದೆ…
4) ಸಮಾಜದಲ್ಲಿ ಆರ್ಥಿಕವಾಗಿ ಕಡುಬಡತನ ಸ್ಥಿತಿಯಲ್ಲಿ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾವೆಲ್ಲರೂ ಕುಟುಂಬದ ಸದಸ್ಯರಾಗಿ ನೆರವಾಗುವುದು
5) ನಮ್ಮ ನುಡಿ ,ನಮ್ಮ ಸಂಸ್ಕೃತಿ ಬೆಳೆಸುವ ಕಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಚನೆಗಳೊಂದಿಗೆ
6) ಕ್ರೀಡೆಗೆ ಪ್ರಾಮುಖ್ಯತೆ ಹಾಗೂ ಪ್ರತಿಭಾವಂತ ಬಡ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ
7) ಸ್ವಚ್ಛ ಭಾರತ ಕನಸಿನೊಂದಿಗೆ ಮುಂದೆಸಾಗಲಿದ್ದೇವೆ
8) ಪ್ರಕೃತಿಕ ವಿಕೋಪದ ಸಂದರ್ಭದಲ್ಲಿ ಕೈಲಾದ ಸಹಾಯ ಹಾಗೂ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದು
9) ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕೈಲಾದ ಆರ್ಥಿಕ ಸಹಾಯ
10) ಆಶ್ರಮಗಳಿಗೆ ಕೈಲಾದ ಆರ್ಥಿಕ ಸಹಾಯ
11) ಅಳಿವಿನಂಚಿನಲ್ಲಿರುವ ಕನ್ನಡ ಶಾಲೆಗೆ ಹೊಸ ರೂಪ ನೀಡುವುದು
12) ನಿರುದ್ಯೋಗಿಳಿಗೆ ಉದ್ಯೋಗ ಮಾಹಿತ ನೀಡುವುದು ಹಾಗೂ ಉದ್ಯೋಗ ಮೇಳ ಯೋಜನೆ
13) ಭಾರತೀಯ ಸೇನೆಗೆ ಸೇರಲು ಬಯಸುವ ಬಡ ಯುವಕ ಯುವತಿಯರಿಗೆ ಆರ್ಥಿಕ ಸಹಾಯ
14) ಕಾರ್ಮಿಕರ ಹಕ್ಕುಗಳ ಪರವಾಗಿ ಧ್ವನಿಯಾಗಿರುವುದು
15) ಶೋಷಣೆ ಒಳಗಾದ ವಿದ್ಯಾರ್ಥಿಗಳ ಪರ ನಿಲ್ಲುವುದು
16) ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಕಾರ್ಯಕ್ರಮ
ನಾವು ನಮ್ಮವರು ಎನ್ನುವ ಯೋಚನೆಯೊಂದಿಗೆ ಸಂಘಟನೆ ಮೂಲಕ ಬಲಯುತರಾಗಿ ಸಾಮಾಜಿಕ ಸೇವೆ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗುವುದು
ವಿ . ಸೂ
ನಮ್ಮ ತಂಡವು ಕರಾವಳಿಗೆ ಮಾತ್ರ ಸೀಮಿತವಾಗಿಲ್ಲ ಯಾವುದೇ ಜಾತಿ ಧರ್ಮ ಬೇಧವಿಲ್ಲದೆ ಸದಾ ಸಾಮಾಜಿಕ ಚಟುವಟಿಕೆಗಳಿಗೂ ಸಿದ್ಧ
ನಮ್ಮಲ್ಲಿರುವ ಕನಸುಗಳು ನೂರೊಂದು
ಹೀಗೆ ಹಲವು ಕನಸುಗಳು ಕೂಡಿಕೊಳ್ಳಲಿದೆ …
ಕನಸನ್ನ ಕಂಡಿದ್ದೇವೆ ನಮಗಾಗಿ ಕಂಡ ಕನಸಲ್ಲ ನಮ್ಮವರಿಗಾಗಿ ಕಂಡಂತ ಕನಸು ….
ಪ್ರೋತ್ಸಾಹಿಸುವ ವಿಚಾರ ನಿಮ್ಮದು -ಮುಂದಿನ ಹೆಜ್ಜೆ ಇಡುವ ಜವಾಬ್ದಾರಿ ನಮ್ಮದು..
ನೀವು ಕೂಡ ನಮ್ಮಲ್ಲಿ ಒಬ್ಬರು ಎನ್ನುವ ಹಾಗೆ ಹರಸಿ ಹಾರೈಸಿ ಆಶೀರ್ವದಿಸಿ….
ಕರಾವಳಿ ಸಿರಿ ಕ್ಲಬ್ ಬೆಂಗಳೂರು
