Home » ನಟ ಪುನೀತ್ ರಾಜ್ ಕುಮಾರ್ ಸಮಾಧಿಯ ಬಳಿ ನಡೆಯಿತೊಂದು ಪವಾಡ | ಎಲ್ಲಿಂದಲೋ ಹಾರಿ ಬಂದು ಸಮಾಧಿಗೆ ಪ್ರದಕ್ಷಿಣೆ ಹಾಕಿ ಮಾಯವಾದ ನಾಟಿ ಕೋಳಿ

ನಟ ಪುನೀತ್ ರಾಜ್ ಕುಮಾರ್ ಸಮಾಧಿಯ ಬಳಿ ನಡೆಯಿತೊಂದು ಪವಾಡ | ಎಲ್ಲಿಂದಲೋ ಹಾರಿ ಬಂದು ಸಮಾಧಿಗೆ ಪ್ರದಕ್ಷಿಣೆ ಹಾಕಿ ಮಾಯವಾದ ನಾಟಿ ಕೋಳಿ

by ಹೊಸಕನ್ನಡ
0 comments

ಲವಲವಿಕೆಯ ವ್ಯಕ್ತಿತ್ವ, ಸದಾ ನಗೆಸೂಸುವ ಮುಖ, ಎಲ್ಲರೊಡನೆ ಬೆರೆಯುವ ಆತ್ಮೀಯತೆ, ಮುಗ್ಧತೆ ತುಂಬಿದ ಅದ್ಭುತ ನಟ ಪುನೀತ್ ರಾಜ್ ಕುಮಾರ್. ಇವರ ಅಕಾಲಿಕ ಮರಣದ ಆಘಾತವನ್ನು ಅರಗಿಸಿಕೊಳ್ಳಲು ಇನ್ನೂ ಕೂಡ ಕಷ್ಟಪಡುತ್ತಿದ್ದಾರೆ ಅದೆಷ್ಟೋ ಮಂದಿ.

ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನಗಲಿ 20 ದಿನಗಳೇ ಕಳೆದುಹೋದವು. ಬದುಕಿದ್ದಾಗ ಅವರು ನಡೆದುಕೊಂಡ ರೀತಿ, ಅವರ ಆದರ್ಶಗಳು, ಅವರೊಂದಿಗಿನ ಒಡನಾಟದ ಕುರಿತಾಗಿ ಇನ್ನೂ ಅವರ ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ. ಇದೇ ಸ್ಮರಣೆಯೊಂದಿಗೇ ನಿನ್ನೆ ‘ಪುನೀತ ನಮನ’ ಕಾರ್ಯಕ್ರಮವೂ ನಡೆದಿದೆ. ಇದೇ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ.

ಹೌದು, ಪುನೀತ್ ರಾಜ್‌ಕುಮಾರ್ ಅವರಿಗೆ ನಾಟಿ ಕೋಳಿ ಸಾಂಬಾರು ತುಂಬಾ ಇಷ್ಟ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ತೀರಾ ಅಚ್ಚರಿಯ ವಿಷಯ ಎಂದರೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇರುವ ಅವರ ಸಮಾಧಿ ಬಳಿ ಬಂದ ನಾಟಿ ಕೋಳಿಯೊಂದು ಸಮಾಧಿ ಮುಂದೆ ಕುಳಿತು ಕೊನೆಗೆ ಅದಕ್ಕೆ ಪ್ರದಕ್ಷಿಣೆ ಹಾಕಿ ಮಾಯವಾಗಿದೆ.

ಇದನ್ನು ಕಂಡು ಅಭಿಮಾನಿಗಳಿಗೆ ತುಂಬಾ ಆಶ್ಚರ್ಯವಾಗಿದೆ. ಅಪ್ಪುವಿಗೆ ದೊಡ್ಡವರು ಮಾತ್ರವಲ್ಲದೇ ತೀರಾ ಚಿಕ್ಕ ಚಿಕ್ಕ ಪುಟಾಣಿಗಳು ಕೂಡ ಅಭಿಮಾನಿಗಳೇ. ತಮ್ಮ ನೆಚ್ಚಿನ ಅಪ್ಪು ಇನ್ನಿಲ್ಲ ಎಂದು ತಿಳಿದಾಗ ಕಣ್ಣೀರು ಸುರಿಸಿದ ಮಕ್ಕಳು ಅದೆಷ್ಟೋ ಮಂದಿ. ಪುನೀತ್ ಅವರ ಅಂತಿಮ ದರ್ಶನಕ್ಕೆ ಬಂದವರಲ್ಲಿ ಮಕ್ಕಳು ಕೂಡ ಅಧಿಕ ಮಂದಿ ಇದ್ದರು.

ಆದರೆ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳು ಕೂಡ ಅಪ್ಪು ಅವರನ್ನು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಆದರೆ ಈ ಕೋಳಿ ಎಲ್ಲಿಂದ ಬಂತು, ನಂತರ ಎಲ್ಲಿಗೆ ಹೋಯ್ತು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ!

You may also like

Leave a Comment