Home » SSLC ಪರೀಕ್ಷೆಗೆ ಕಲರ್ ಡ್ರೆಸ್ ನಲ್ಲಿ ಬಂದರೂ ಪರೀಕ್ಷೆ ಬರೆಯಲು ಅವಕಾಶ : ಬಿ ಸಿ ನಾಗೇಶ್

SSLC ಪರೀಕ್ಷೆಗೆ ಕಲರ್ ಡ್ರೆಸ್ ನಲ್ಲಿ ಬಂದರೂ ಪರೀಕ್ಷೆ ಬರೆಯಲು ಅವಕಾಶ : ಬಿ ಸಿ ನಾಗೇಶ್

by Mallika
0 comments

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಮಾತ್ರವಲ್ಲದೇ ಕಲರ್ ಡ್ರೆಸ್ ನಲ್ಲಿ ಬಂದರೂ, ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ವಿಧಾನಪರಿಷತ್ ನಲ್ಲಿ ಸೋಮವಾರ ಶೂನ್ಯವೇಳೆ ಕಾಂಗ್ರೆಸ್ ನ ಪ್ರಕಾಶ್ ರಾಥೋಡ್ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಸಮವಸ್ತ್ರ ಕಡ್ಡಾಯ ನಿಯಮವನ್ನು ಸಡಿಲಗೊಳಿಸುವಂತೆ ಒತ್ತಾಯ ಮಾಡಿದ್ದಾರೆ.

ಇದಕ್ಕೆ ಉತ್ತರವಾಗಿ ಬಿ ಸಿ ನಾಗೇಶ್ ಅವರು, ಸಮವಸ್ತ್ರ ಕಡ್ಡಾಯ ಎಂದು ಮೊದಲೇ ಹೇಳಲಾಗಿದೆ. ಒಂದು ವೇಳೆ ಸಮವಸ್ತ್ರ ಇಲ್ಲದಿದ್ದ ಪಕ್ಷದಲ್ಲಿ ಕಲರ್ ಡ್ರೆಸ್ ನಲ್ಲಿ ಬಂದರೂ ಪರೀಕ್ಷೆ ಬರೆಯಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.

You may also like

Leave a Comment