Home » ಸುಪ್ರಭಾತ vs ಅಜಾನ್ ಸಮರ : ಸಾವಿರ ದೇವಸ್ಥಾನಗಳಲ್ಲಿ ಲೌಡ್‌ಸ್ಪೀಕರ್‌ನಲ್ಲಿ ಸುಪ್ರಭಾತ

ಸುಪ್ರಭಾತ vs ಅಜಾನ್ ಸಮರ : ಸಾವಿರ ದೇವಸ್ಥಾನಗಳಲ್ಲಿ ಲೌಡ್‌ಸ್ಪೀಕರ್‌ನಲ್ಲಿ ಸುಪ್ರಭಾತ

by Mallika
0 comments

ಮೈಸೂರು: ಹಿಜಾಬ್ ವಿವಾದದಿಂದ ಶುರುವಾದ ಕೋಮುಸಂಘರ್ಷ ಶಾಲೆಯ ವಾತಾವರಣದಿಂದ ಮಸೀದಿ-ಮಂದಿರದ ಆವರಣದವರೆಗೂ ಬಂದಿದ್ದು, ಇದೀಗ ಆಜಾನ್‌ಗೆ ಓಂಕಾರದ ಸವಾಲು ಕೇಳಿಬಂದಿದೆ. ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಇಂಥದ್ದೊಂದು ಸವಾಲೆಸೆದಿದ್ದಾರೆ.

ಮಸೀದಿಗಳಲ್ಲಿ ಲೌಡ್‌ಸ್ಪೀಕರ್ ಮೂಲಕ ಆಜಾನ್ ಕೂಗುವ ವಿಚಾರವಾಗಿ ಮಾತನಾಡಿರುವ ಮುತಾಲಿಕ್, ಆಜಾನ್ ಮೈಕ್ ತೆಗೆಸಲು ಗಡುವು ನೀಡಿದ್ದರೂ ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಹೀಗಾಗಿ ನಾವು ರಾಜ್ಯದ 1 ಸಾವಿರ ದೇವಸ್ಥಾನ ಮಠಗಳಲ್ಲಿ ಮೇ 9ರಂದು ಮೈಕ್ ಮೂಲಕ ಓಂಕಾರ ಸುಪ್ರಭಾತ ಹಾಕಲಿದ್ದೇವೆ ಎಂದು ಮುತಾಲಿಕ್ ಹೇಳಿದ್ದಾರೆ.

You may also like

Leave a Comment