Home » ಕಳ್ಳತನ ಮಾಡಲು ವಿಮಾನದಲ್ಲೇ ಬಂದು ವಿಮಾನದಲ್ಲೇ ವಾಪಸ್ ಹೋದ ಹೈಫೈ ಕಳ್ಳ !! | ಅಷ್ಟಕ್ಕೂ ಈತನ ಟಾರ್ಗೆಟ್ ಏನು ಗೊತ್ತಾ??

ಕಳ್ಳತನ ಮಾಡಲು ವಿಮಾನದಲ್ಲೇ ಬಂದು ವಿಮಾನದಲ್ಲೇ ವಾಪಸ್ ಹೋದ ಹೈಫೈ ಕಳ್ಳ !! | ಅಷ್ಟಕ್ಕೂ ಈತನ ಟಾರ್ಗೆಟ್ ಏನು ಗೊತ್ತಾ??

by ಹೊಸಕನ್ನಡ
0 comments

ಕಳ್ಳರು ಹೇಗೆ, ಯಾವಾಗ, ಎಲ್ಲಿ, ಯಾವ ರೀತಿಯಲ್ಲಿ ಕಳ್ಳತನ ಮಾಡುತ್ತಾರೆ ಎಂಬುದು ತಿಳಿಯದ ವಿಷಯ. ಕಳ್ಳರಲ್ಲಿ ತುಂಬಾ ವಿಚಿತ್ರವಾದ, ಆಶ್ಚರ್ಯಕರ ರೀತಿಯಲ್ಲಿ ಕಳ್ಳತನ ಮಾಡುವ ಕಳ್ಳರು ಇತ್ತೀಚಿಗೆ ಹೆಚ್ಚಾಗಿದ್ದಾರೆ. ಇದಕ್ಕೆ ಉದಾಹರಣೆಯಂತಿದೆ ಈ ಕಳ್ಳತನದ ಸ್ಟೋರಿ!!

ಐದು ವರ್ಷಗಳ ಹಿಂದೆ ಕಳ್ಳತನ ಮಾಡಿ
ಸಿಕ್ಕಿಹಾಕಿಕೊಂಡಿದ್ದ ಕೆಲಸಗಾರ ಮತ್ತೆ ಅಲ್ಲೇ ಕಳವು ಮಾಡಿ ಮಾಲೀಕನ ವಿರುದ್ಧ ಸೇಡು ತೀರಿಸಿಕೊಂಡಿದ್ದಾನೆ. ವಿಶೇಷವೆಂದರೆ, ಈ ಕಳವಿಗಾಗಿ ಆತ ವಿಮಾನದಲ್ಲಿ ಬಂದು ವಿಮಾನದಲ್ಲೇ ವಾಪಸ್ ಹೋಗಿದ್ದಾನೆ.

ಬೆಂಗಳೂರಿನ ಬಸವನಗುಡಿ ಠಾಣಾ ವ್ಯಾಪ್ತಿಯ ರಾಮ್ ಗ್ರೂಪ್ ದೇವ್ ಬಟ್ಟೆ ಅಂಗಡಿಯಲ್ಲಿ ಇಂಥದ್ದೊಂದು ಕಳ್ಳತನ ನಡೆದಿದೆ. ಕಳವು ಮಾಡಿದ್ದ ಈ ವ್ಯಕ್ತಿ ರಾಜಸ್ಥಾನ ಮೂಲದವನಾಗಿದ್ದು, ಈ ಕಳವಿಗಾಗಿ ಆತ ವಿಮಾನದಲ್ಲಿ ಬೆಂಗಳೂರಿಗೆ ಬಂದು ವಿಮಾನದಲ್ಲಿ ಮರಳಿದ್ದಾನೆ.

ಐದು ವರ್ಷಗಳ ಹಿಂದೆ ಈತ ಇದೇ ರಾಮ್‌ದೇವ್ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ. ಆ ಸಮಯದಲ್ಲಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದ. ನಂತರ ಈತನನ್ನು ಕೆಲಸದಿಂದ ಕಿತ್ತು ಹಾಕಲಾಗಿತ್ತು. ಆದರೆ ಕದ್ದು ಸಿಕ್ಕಿಬಿದ್ದಿದ್ದ ಈತ ಅಂಗಡಿ ಮಾಲೀಕನ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ. ಕೆಲಸ ಬಿಟ್ಟ ಮೇಲೂ ಆಗಾಗ ಅಂಗಡಿ ಬಳಿಗೆ ಬಂದು ಗಮನಿಸಿ ಹೋಗಿದ್ದ ಎನ್ನಲಾಗಿದೆ.

ಕಳೆದ ವಾರ ಅಂಗಡಿಯಲ್ಲಿ ಯಾರೂ ಇಲ್ಲದ್ದನ್ನು ನೋಡಿದ್ದ ಈತ ಈ ಕೃತ್ಯ ಎಸಗಿದ್ದಾನೆ. ಅಂಗಡಿಗೆ ನುಗ್ಗಿ ಡ್ರಾಯರ್ ನಲ್ಲಿದ್ದ 2 ಲಕ್ಷ ರೂಪಾಯಿ ಕದ್ದುಕೊಂಡು ಹೋಗಿದ್ದಾನೆ. ಇದಕ್ಕಾಗಿ ಈತ ರಾಜಸ್ಥಾನದಿಂದ ವಿಮಾನದಲ್ಲಿ ಬಂದಿದ್ದ ಎನ್ನಲಾಗಿದೆ.

ಈ ಬಗ್ಗೆ ಅಂಗಡಿ ಮಾಲೀಕ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

You may also like

Leave a Comment