Home » ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು: ಹಿಂದೂಗಳು ಸಾಯಲಿ, ನಮ್ಮವರೂ ಕೆಲವರು ಸಾಯೋಣ – ಆಡಿಯೋ ವೈರಲ್ !

ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು: ಹಿಂದೂಗಳು ಸಾಯಲಿ, ನಮ್ಮವರೂ ಕೆಲವರು ಸಾಯೋಣ – ಆಡಿಯೋ ವೈರಲ್ !

by Mallika
0 comments

ಕೊಡಗಿನಲ್ಲಿ (Kodagu) ಈಗ ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ (Bomb) ಹಾಕಬೇಕು ಎಂದು ಮಾತನಾಡಿರುವ ಆಡಿಯೋ ಒಂದು ಮಡಿಕೇರಿ (Madikeri) ನಗರದ ಜನತೆಯಲ್ಲಿ ಆತಂಕ ಮೂಡಿಸಿದೆ.

ದೇಶದ್ರೋಹಿ ಚಟುವಟಿಕೆಗಳ ಹಿನ್ನೆಲೆ ಸಂಚು ರೂಪಿಸಲಾಗುತ್ತಿದೆ ಎಂದು ಪಿಎಫ್‍ಐ (PFI) ಸಂಘಟನೆಯನ್ನು ಇತ್ತೀಚೆಗಷ್ಟೇ ನಿಷೇಧ ಮಾಡಲಾಗಿದೆ. ಆದರೆ ಕಳೆದ ಆರು ತಿಂಗಳ ಹಿಂದೆ ಅಂದರೆ ಏಪ್ರಿಲ್ ರಂದು ಮಾತಾಡಿದ ವಿಡಿಯೋ ಒಂದು ವೈರಲ್ ಆಗಿದೆ.

‘ ಮಡಿಕೇರಿ ನಗರಕ್ಕೆ ಬಾಂಬ್ ಹಾಕಬೇಕು. ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು. ನಮ್ಮವರು ಒಂದಷ್ಟು ಜನರು ಸತ್ತರೂ ಪರವಾಗಿಲ್ಲ ಎಂದು ಮಾತನಾಡಿರುವ ಆಡಿಯೋ ಲೀಕ್ ಆಗಿದ್ದು, ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ. 50ಕ್ಕೂ ಹೆಚ್ಚು ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಪೆಟ್ರೋಲ್ ಬಾಂಬ್ ಹಾಕಬೇಕು ‘ ಹೀಗೆಂದು ಮಲೆಯಾಳಂ ಭಾಷೆಯಲ್ಲಿ ಮಾತನಾಡಿರುವ ಆಡಿಯೋ ಹರಿದಾಡುತ್ತಿದೆ.

ನಾವು 50 ಜನರ ತಂಡ ಕಟ್ಟಿ ತರಬೇತಿ ನೀಡಬೇಕು. ಎಲ್ಲರೂ 50 ಸಾವಿರ ಒಂದು ಲಕ್ಷ ಹಣ ಹೂಡಬೇಕು. ಅದನ್ನು ಬಳಸಿಕೊಂಡು ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ ಹಾಕಿಬಿಡಬೇಕು. ಆ…….ನನ್ ಮಕ್ಕಳಿಗೆ ಸರ್ಯಾಗಿ ಬುದ್ದಿ ಕಲಿಸಬೇಕು. ಇಡೀ ಮಡಿಕೇರಿ ಟೌನ್ ಹೊತ್ತಿ ಉರಿಯಬೇಕು. ಮಡಿಕೇರಿ ಮಾತ್ರ ಅಲ್ಲ ಎಲ್ಲಾ ಕಡೆ ಬಾಂಬ್ ಹಾಕಬೇಕು. ಅಲ್ಲಲ್ಲ.. ಇಡೀ ಮಡಿಕೇರಿ ಹೊತ್ತಿ ಉರಿಯಬೇಕು. ಅವರೂ ಸಾಯಲಿ, ನಮ್ಮವರೂ ಕೆಲವರು ಸಾಯೋಣ. ಒಟ್ಟಾರೆ ಅವರಿಗೆ ಭಯ ನಮ್ಮ ಬಗ್ಗೆ ಭಯ ಹುಟ್ಟಬೇಕು. 50 ಜಾಗದಲ್ಲಿ ಬಾಂಬ್ ಹಾಕಬೇಕು. ಆಗ ಅವರ ಪಾರ್ಟಿ ಲೈಫ್ ಲಾಂಗ್ ಇರಲ್ಲ. ಬಿಜೆಪಿಯವರು ಓಟಿಗೆ ನಿಲ್ಲೋದಕ್ಕೂ ಹೆದರಬೇಕು ‘ ಎಂಬ ಆಡಿಯೋ ಅದಾಗಿದೆ.

‘ ಮುಂದಿನ ಎಲೆಕ್ಷನ್ ನಲ್ಲಿ ರಾಜ್ಯದಲ್ಲಿ ಬಿಜೆಪಿ (BJP) ಸೋಲುತ್ತದೆ. ಆಗ ಇವರಿಗೆ ಗೊತ್ತಾಗುತ್ತದೆ. ಸಿದ್ದರಾಮಯ್ಯ (Siddaramaiah) ಮೈಂಡ್ ಜಾತ್ಯಾತೀತ ಮೈಂಡ್. ಡಿಕೆ ಶಿವಕುಮಾರ್ ನ ಮೈಂಡ್ ಹಿಂದುತ್ವದ್ದು. ಇದೆರಡೂ ಬೇರೆ ಬೇರೆ. ಎರಡೂ ಒಂದೇ ಆಗಲು ಸಾಧ್ಯವಿಲ್ಲ’ ಹೀಗೊಂದು ಆಡಿಯೋ ವೈರಲ್ ಆಗಿದೆ.

ಮಡಿಕೇರಿ ನಿವಾಸಿ ಶೇಷಪ್ಪ ರೈ ಎಂಬವರು ಯಾವುದೋ ಕೆಲಸದ ನಿಮಿತ್ತ ಮುಸ್ತಫಾ ಎಂಬ ವ್ಯಕ್ತಿಗೆ ಕರೆ ಮಾಡಿದ್ದಾರೆ. ಈ ವೇಳೆ ಮುಸ್ತಫಾ, ಶೇಷಪ್ಪ ರೈ ಅವರ ಫೋನ್ ಅನ್ನು ಮಿಸ್ ಆಗಿ ರಿಸೀವ್ ಮಾಡಿದ್ದಾರೆ. ಅದರ ಅರಿವಿಲ್ಲದೆ ಫೋನ್ ಅನ್ನು ತನ್ನ ಜೇಬಿನಲ್ಲಿ ಇರಿಸಿಕೊಂಡಿದ್ದಾರೆ. ಬಳಿಕ ಮಡಿಕೇರಿಯಲ್ಲಿ ಪೆಟ್ರೋಲ್ ಬಾಂಬ್ ಹಾಕುವ ವಿಷಯವನ್ನು ತನ್ನ ಸ್ನೇಹಿತ ಅಬ್ದುಲ್ಲಾ ಎಂಬುವವನೊಂದಿಗೆ ಮುಖತಃ ಮಾತನಾಡಿದ್ದಾರೆ. ಈ ಕರೆ ಶೇಷಪ್ಪ ಅವರ ಫೋನಿನಲ್ಲಿ ರೆಕಾರ್ಡ್ ಆಗಿದೆ.

ಇತ್ತೀಚೆಗೆ ಕಾಲ್ ರೆಕಾರ್ಡ್‍ಗಳನ್ನು ಪರಿಶೀಲನೆ ನಡೆಸುವಾಗ ಇದು ಬೆಳಕಿಗೆ ಬಂದಿದ್ದು ಶೇಷಪ್ಪ ರೈ ಅವರು ತಕ್ಷಣ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರೈ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರದ ಪೊಲೀಸರು ಮಡಿಕೇರಿ ನಗರಸಭೆ ಸದಸ್ಯ ಮುಸ್ತಫಾ, ಬೆಟ್ಟಗೇರಿ ಅಬ್ದುಲ್ಲಾ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

You may also like

Leave a Comment