Home » ನಕ್ಷತ್ರ ಆಮೆಯ ಮಾರಾಟ, ಇಬ್ಬರ ಬಂಧನ | ಅಳಿವಿನಂಚಿನಲ್ಲಿರುವ ಪ್ರಾಣಿಗೆ ಬಂತು ಸಂಕಟ!

ನಕ್ಷತ್ರ ಆಮೆಯ ಮಾರಾಟ, ಇಬ್ಬರ ಬಂಧನ | ಅಳಿವಿನಂಚಿನಲ್ಲಿರುವ ಪ್ರಾಣಿಗೆ ಬಂತು ಸಂಕಟ!

0 comments

ಮಡಿಕೇರಿ:- ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿಯ ಸಿ. ಐ. ಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ.

ಎಸ್. ಎ. ಜಗದೀಶ್ ಕುಮಾರ್ ಶೀಖ್ ಗೈಲೂಸ ಬಂಧಿತ ಆರೋಪಿಗಳಾಗಿದ್ದಾರೆ. ಹಾರಂಗಿ ಬೊಳ್ಳೂರು ಮಾದಾಪಟ್ಟಣ ರಸ್ತೆಯ ಜಂಕ್ಷನ್ ಬಳಿ ದಾಳಿ ನಡೆಸಿದ ಪೊಲೀಸ್ ಆರೋಪಿಗಳ ಸಹಿತ ಒಂದು ನಕ್ಷತ್ರ ಆಮೆಯನ್ನು ಹಿಂಪಡೆಯಲು ಯಶಸ್ವಿಯಾಗಿದ್ದಾರೆ.


ಸಿ. ಐ. ಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಕ ಮೇರೆಗೆ ಮಡಿಕೇರಿ ಸಿ ಐ. ಡಿ ಪೊಲೀಸ್ ಅರಣ್ಯ ಗಟಕದ ಪೊಲೀಸ್ ಅಧೀಕ್ಷ ಕೆ.ಬಿ . ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್. ಐ.ಸಿ.ಯು . ಸವಿ , ಹೆಡ್ ಕಾನ್ಸ್ಟೇಬಲ್ ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೀಶ್ ,ಮೋಹನ ಮತ್ತು ಕಾನ್ಸ್ಟೇಬಲ್ಗಳಾದ ಸ್ವಾಮಿ ಮತ್ತು ಮಂಜುನಾಥ್ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

You may also like

Leave a Comment