Home » ಒಂದೇ ಮನೆಯ ಇಬ್ಬರ ದುರಂತ ಸಾವು!!ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ನದಿಗಿಳಿದ ತಾಯಿಯೂ ನೀರುಪಾಲು!!ಘಟನೆಯಿಂದ ಇಡೀ ಗ್ರಾಮಕ್ಕೇ ಅವರಿಸಿದ ಸೂತಕದ ಛಾಯೆ

ಒಂದೇ ಮನೆಯ ಇಬ್ಬರ ದುರಂತ ಸಾವು!!ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ನದಿಗಿಳಿದ ತಾಯಿಯೂ ನೀರುಪಾಲು!!ಘಟನೆಯಿಂದ ಇಡೀ ಗ್ರಾಮಕ್ಕೇ ಅವರಿಸಿದ ಸೂತಕದ ಛಾಯೆ

0 comments

ಮಗು ನೀರು ಪಾಲಾಗುತ್ತಿರುವುದನ್ನು ಕಂಡು ಬಚಾವ್ ಮಾಡಲು ತೆರಳಿದ ತಾಯಿಯೂ ನೀರುಪಾಲಾದ ಹೃದಯ ವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.

ಮಹಿಳೆ ದನವನ್ನು ಮೇಯಿಸಲು ಹೋಗಿದ್ದಾಗ ಆಕೆಯ ಮಗ ನೀರುಪಾಲಾಗುತ್ತಿರುವುದನ್ನು ಕಂಡು ರಕ್ಷಿಸಲು ಹೋಗಿ ತಾಯಿಯೂ ಆತನೊಂದಿಗೆ ನೀರುಪಾಲಾಗಿದ್ದಾಳೆ.

ಇಬ್ಬರ ಮೃತದೇಹವೂ ಪತ್ತೆಯಾಗಿದ್ದು, ಮೃತರನ್ನು ತಾಯಿ ರೇವತಿ ಹಾಗೂ ಆಕೆಯ ಪುತ್ರ ಕಾರ್ಯಪ್ಪ (12) ಎಂದು ಗುರುತಿಸಲಾಗಿದೆ.

ಟಿ.ಶೆಟ್ಟಿಗೇರಿ ಗ್ರಾಮದ ಲಕ್ಷ್ಮಣತೀರ್ಥ ನದಿಯಲ್ಲಿ ಈ ದುರಂತ ಸಂಭವಿಸಿದ್ದು, ಸ್ಥಳೀಯರು ನಿನ್ನೆ ರಕ್ಷಣಾ ಕಾರ್ಯಾಚರಣೆಗೆ ಮುಂದಾದರೂ ಅಷ್ಟರಲ್ಲಾಗಲೇ ರೇವತಿ ಸಾವಿಗೀಡಾಗಿದ್ದು, ಅವರ ಶವವವನ್ನು ಹೊರತೆಗೆಯಲಾಗಿತ್ತು. ಆದರೆ ನಿನ್ನೆ ಪುತ್ರನ ಪತ್ತೆ ಆಗಿರಲಿಲ್ಲ. ಇಂದು ಮತ್ತೆ ಶೋಧ ಮುಂದುವರಿಸಿದಾಗ ಬಾಲಕನ ಶವ ಸಿಕ್ಕಿದೆ.ಸದ್ಯ ಘಟನೆಯಿಂದ ಇಡೀ ಗ್ರಾಮಕ್ಕೆ ಸೂತಕದ ಛಾಯೆ ಆವರಿಸಿದ್ದು, ಒಂದೇ ಮನೆಯ ಇಬ್ಬರ ಮೃತದೇಹ ಕಂಡು ಮನೆ ಮಂದಿಯ ಆಕ್ರಂದನ ಮುಗಿಲುಮುಟ್ಟಿದೆ.

You may also like

Leave a Comment