Home » ತೋಟದಲ್ಲಿ ಬಾಳೆ ಎಲೆ ತರಲು ಹೋದಾಗ, ಪ್ರವಾಹದಲ್ಲಿ ಕೊಚ್ಚಿ ಹೋದ ಶಿಕ್ಷಕಿ | ಮೃತದೇಹ ಪತ್ತೆ

ತೋಟದಲ್ಲಿ ಬಾಳೆ ಎಲೆ ತರಲು ಹೋದಾಗ, ಪ್ರವಾಹದಲ್ಲಿ ಕೊಚ್ಚಿ ಹೋದ ಶಿಕ್ಷಕಿ | ಮೃತದೇಹ ಪತ್ತೆ

by Mallika
0 comments

ಎಲ್ಲೆಡೆ ಮಳೆ ಬಿರುಸಿನಿಂದ ಕೂಡಿದೆ. ಅಪಾರ ಆಸ್ತಿಪಾಸ್ತಿ ನಷ್ಟವುಂಟಾಗಿದೆ. ಕೃಷಿ, ರಸ್ತೆ ತುಂಬೆಲ್ಲಾ ನೀರು ಹರಿದು ಜನ ಸಂಚಾರ ಅಸ್ತವ್ಯಸ್ತವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ ಸುರಿಯುತ್ತಿದ್ದು, ಇಲ್ಲಿನ ಮಹಿಳೆಯೊಬ್ಬರು ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಘಟನೆಯೊಂದು ನಡೆದಿತ್ತು.

ಭೀಮನಡಿ ಗ್ರಾಮದ ಕೂರನಗುಂದದಲ್ಲಿ ಕೃಷಿಕ ರವೀಂದ್ರನ್ ಅವರ ಪತ್ನಿ, ನಿವೃತ್ತ ಶಿಕ್ಷಕಿ ಲತಾ ಅವರು ತೋಟಕ್ಕೆ ಬಾಳೆ ಎಲೆ ತರಲು ಹೋಗಿದ್ದಾಗ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಸಂದರ್ಭದಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ದುರದೃಷ್ಟಕರ ಘಟನೆ ನಡೆದಿತ್ತು. ಎರಡು ತಿಂಗಳ ಹಿಂದೆಯಷ್ಟೇ ತಮ್ಮ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದರು.

ಈಗ ಅವರ ಮೃತದೇಹ ಪ್ಲಾಚಿಕರ ಮೀಸಲು ಅರಣ್ಯದ ತೋಡಿಗೆ ನಿರ್ಮಿಸಿದ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ. ಮೃತರು ಪತಿ, ಪುತ್ರನನ್ನು ಅಗಲಿದ್ದಾರೆ.

ಮಂಗಲ್ಪಾಡಿ ಪಂಚಾಯತ್‌ನ ಇಚ್ಚಂಗೋಡು ವಳಯಂ ರಸ್ತೆಯ ಹೊಳೆ ಭಾಗ ಕುಸಿದಿದೆ. ಇತ್ತೀಚೆಗಷ್ಟೇ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಇದಾಗಿದ್ದು, ಇನ್ನಷ್ಟು ಮಳೆ ಸುರಿದಲ್ಲಿ ಹೊಳೆ ಪಕ್ಕದ ರಸ್ತೆ ಕುಸಿಯಲಿದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

You may also like

Leave a Comment