Home » ತನ್ನ ಎರಡೂ ಕೈಗಳನ್ನು ಕಟ್ಟಿ ನದಿಯಲ್ಲಿ ಈಜಿ ಇತಿಹಾಸ ನಿರ್ಮಿಸಿದ 70ರ ವೃದ್ಧೆ!

ತನ್ನ ಎರಡೂ ಕೈಗಳನ್ನು ಕಟ್ಟಿ ನದಿಯಲ್ಲಿ ಈಜಿ ಇತಿಹಾಸ ನಿರ್ಮಿಸಿದ 70ರ ವೃದ್ಧೆ!

0 comments

ಕೇರಳ: ಸಾಧನೆಗೆ ವಯಸ್ಸು ಮುಖ್ಯವಲ್ಲ ಎಂಬ ಮಾತು ಮತ್ತೆ-ಮತ್ತೆ ಸಾಬೀತು ಆಗುತ್ತಲೇ ಇದ್ದು, ಇದೀಗ ಮತ್ತೆ ಸಾಕ್ಷಿಯಾಗಿದ್ದರೆ ಕೇರಳದ 70ರ ವೃದ್ಧೆ. ಹೌದು. ಈ ಯಂಗ್ ಲೇಡಿ ತನ್ನ ಎರಡೂ ಕೈಗಳನ್ನು ಕಟ್ಟಿ ಪೆರಿಯಾರ್ ನದಿಯಲ್ಲಿ ಈಜಿ ಇತಿಹಾಸ ನಿರ್ಮಿಸಿದ್ದಾರೆ.

70 ವರ್ಷದ ಮಹಿಳೆ ಅಲುವಾದ ತೆಕ್ಕಟ್ಟು ಕರದ ಆರಿಫಾ, ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಆಯೋಜಿಸಿದ್ದ ಈಜು
ಕಾರ್ಯಕ್ರಮದಲ್ಲಿ ಸುಮಾರು 780 ಮೀಟರ್ ಅಗಲದ ಪೆರಿಯಾರ್ ನದಿಯಲ್ಲಿ ಕೈಗಳನ್ನು ಕಟ್ಟಿಕೊಂಡು ಈಜಿ ದಾಖಲೆ ನಿರ್ಮಿಸಿದ್ದಾರೆ. ಆರಿಫಾ ವಿ ಕೆ, ಕುನ್ನುಂಪುರಂನ ಬಾಲಕ ಭರತ್ ಕೃಷ್ಣ ಮತ್ತು ಅಶೋಕಪುರಂನ 38 ವರ್ಷದ ಧನ್ಯ ಕೆ ಜಿ ಅವರೊಂದಿಗೆ ಮಡಪಂ ಕಡವುನಿಂದ ಮಣಪ್ಪುರಂ ದೇಸೊಮ್ ಕಡವುವರೆಗೆ ಈಜಿದ್ದಾರೆ.

ಈ ಬಗ್ಗೆ ಮಾತನಾಡಿದ ಆರಿಫಾ, ‘ನನ್ನ ಕುಟುಂಬದ ಒಂಬತ್ತು ಮಂದಿಗೆ ಈಜು ಗೊತ್ತು. ಈ ವರ್ಷದ ಆರಂಭದಲ್ಲಿ ನಾನು ಪೆರಿಯಾರ್ ನದಿಯಲ್ಲಿ ಈಜುತ್ತಿದ್ದೆ. ನನ್ನ ತರಬೇತುದಾರ ಸಾಜಿ ವಳಸ್ಸೆರಿ ಅವರು ಕೈಗಳನ್ನು ಕಟ್ಟಿಕೊಂಡು ಈಜಲು ಪ್ರಯತ್ನಿಸಲು ನನಗೆ ಆತ್ಮವಿಶ್ವಾಸವನ್ನು ತುಂಬಿದರು. ಈಗ ನಾನು ಯಶಸ್ವಿಯಾಗಿದ್ದೇನೆ’ ಎಂದು ಹೇಳಿದ್ದಾರೆ.

You may also like

Leave a Comment