Home » ತನ್ನ ಕಂದನನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದ ತಾಯಿ | ಕಾರಣ….

ತನ್ನ ಕಂದನನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದ ತಾಯಿ | ಕಾರಣ….

0 comments

ಹೆತ್ತ ತಾಯಿಯೇ ತನ್ನ ಕಂದನನ್ನು ಕೊಂದ ದಾರುಣ ಘಟನೆಯೊಂದು ಕೇರಳದ ಅಥೋಲಿಯಲ್ಲಿ ನಡೆದಿದೆ.
ಮುದ್ದು ಮುಖದ ಏಳು ವರ್ಷದ ಬಾಲಕನನ್ನು ತಾಯಿ ಕೊಲೆಮಾಡಿರುವುದಾಗಿ ತನಿಖೆಯಿಂದ ಬಯಲಾಗಿದೆ.

ಡ್ಯಾನಿಶ್ ಹುಸೇನ್ ಅವರ ಪುತ್ರ ಹಮ್ಹಾನ್‌ ಡ್ಯಾನಿಶ್ ಹುಸೇನ್ (7) ಎಂಬವನೇ ಮೃತಪಟ್ಟ ಬಾಲಕ. ತಾಯಿ ಮನೋ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದಳು ಎನ್ನಲಾಗಿದೆ. ತಾಯಿ ಮಹಲ್ ಜುಲೈಮಾ ಎಂಬಾಕೆಯೇ ಕೊಲೆ ಆರೋಪಿ.

ಬಾಲಕಿಗೆ ಆರಂಭದಲ್ಲಿ ಹೃದಯಾಘಾತವಾಗಿತ್ತು ಎಂದು ಹೇಳಲಾಗಿತ್ತು. ಆದರೆ ಅನಂತರ ಅನುಮಾನ ವ್ಯಕ್ತಪಡಿಸುದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಇದೊಂದು ಕೊಲೆ ಎಂದು ಸ್ಪಷ್ಟವಾಗಿದೆ.

ತನಿಖೆ ವೇಳೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಹಿರಂಗವಾಗಿದೆ.

ಬಾಲಕ ಇಲಾಹಿಯಾ ಇಂಗ್ಲಿಷ್ ಶಾಲೆಯ 2ನೇ ತರಗತಿ ವಿದ್ಯಾರ್ಥಿಯಾಗಿದ್ದು, ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಗಂಭೀರ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದ್ದಾನೆ. ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ

You may also like

Leave a Comment