Home » Arecanut Price: ಚೇತರಿಕೆ ಕಾಣದ ಅಡಿಕೆ ಮಾರುಕಟ್ಟೆ : ಕುಸಿತದ ಹಾದಿಯಲ್ಲಿ ಬೆಲೆ

Arecanut Price: ಚೇತರಿಕೆ ಕಾಣದ ಅಡಿಕೆ ಮಾರುಕಟ್ಟೆ : ಕುಸಿತದ ಹಾದಿಯಲ್ಲಿ ಬೆಲೆ

1 comment
Arecanut Price

Arecanut Price: ಕೃಷಿಯನ್ನು ನೆಚ್ಚಿಕೊಂಡಿರುವ ಅನ್ನದಾತರಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇರುತ್ತದೆ. ಅತಿವೃಷ್ಠಿ, ಅನಾವೃಷ್ಟಿ, ಬೆಳೆ ಹಾನಿ, ಕಾಡು ಪ್ರಾಣಿಗಳಿಂದ ಬೆಳೆ ನಷ್ಟ ಹೀಗೆ ನಾನಾ ರೀತಿಯ ಸಮಸ್ಯೆಗಳು ರೈತರನ್ನು ಬೆನ್ನು ಬಿಡದೇ ಕಾಡುತ್ತದೆ. ಅದೇ ರೀತಿ, ಬೆಲೆ ಕುಸಿತ ಕೂಡ ಮುಖ್ಯ ಸಮಸ್ಯೆಗಳಲ್ಲಿ ಒಂದು. ಮಳೆಗಾಲದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದಾಗ ಅಡಿಕೆ(Arecanut)ತೋಟಗಳಲ್ಲಿ ಮಳೆ ನೀರು ಶೇಖರಣೆಯಾಗಿ ಅಲ್ಲಿ ಕೂಡ ಬೆಳೆ ನಷ್ಟವಾಗಿ ನಿಶ್ಚಿತ ಬೆಲೆ ಸಿಗುವುದಿಲ್ಲ. ಇದೆಲ್ಲದರ ನಡುವೆ, ಅಡಿಕೆ ಬೆಳೆಗಾರರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ(Arecanut Price Decrease)ಮುಂದುವರಿದಿದ್ದು, ಬೆಲೆ ಚೇತರಿಕೆ ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ಬೇಸರ ತಂದಿದೆ.

ಗಣೇಶ್ ಚತುರ್ಥಿ ಹಬ್ಬದ ಹೊತ್ತಲ್ಲಿ 500ರ ಗಡಿ ದಾಟುವ ನಿರೀಕ್ಷೆ ಹುಟ್ಟು ಹಾಕಿದ್ದ ಸಿಂಗಲ್ ಚೋಲ್ ಅಡಿಕೆ ಧಾರಣೆ ಬಳಿಕ ಕುಸಿತದ ಹಾದಿ ಹಿಡಿದಿದೆ. ನವರಾತ್ರಿ ಹಬ್ಬ ಪ್ರಾರಂಭವಾಗುವ ಮುನ್ನವೇ ಹಠಾತ್ ಕುಸಿತ ಕಂಡಿದೆ. ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ 480 -490 ರ ಆಸುಪಾಸಿಗೆ ತಲುಪಿದ ಅಡಿಕೆ ಧಾರಣೆ ಇದೀಗ, ಈಗ 60-70 ರೂ. ಕುಸಿತ ಕಂಡ ಪರಿಣಾಮ ಇದೀಗ, ಅಡಿಕೆ ಬೆಲೆ 420ರ ಆಸುಪಾಸಿನಲ್ಲಿ ಬಂದು ನಿಂತಿದೆ.

ಸಿಂಗಲ್ ಚೋಲ್ ಧಾರಣೆ ಈ ಬಾರಿ 500 ತಲುಪುವ ನಿರೀಕ್ಷೆ ತಲೆ ಕೆಳಗಾಗಿದೆ. 450ರ ಆಸುಪಾಸಿನಲ್ಲಿದ್ದ ಸಿಂಗಲ್ ಚೋಲ್ ಅಡಿಕೆ ದರ (Arecanut Price)ಕಳೆದ ವಾರದ ಕೊನೆಯಲ್ಲಿ, ಹೊಸ ಅಡಿಕೆ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಅಡಿಕೆ ಬೆಲೆಯಲ್ಲಿ ಕುಸಿತ ಕಂಡಿದ್ದು, ಸದ್ಯ, ಪ್ರತಿ ಕೆಜಿ ದರ ರೂ. 421ಕ್ಕೆ ತಲುಪಿದೆ.ಇದರ ಜೊತೆಗೆ ಈ ಹಿಂದೆ ಬೆಳೆಗಾರರಿಗೆ (Arecanut growers)ನೆರವಾಗುತ್ತಿದ್ದ ಕ್ಯಾಂಪ್ಕೋ ಸಂಸ್ಥೆ (Campco)ಕೂಡ ತನ್ನದೇ ಆದ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ ಎನ್ನಲಾಗಿದೆ. ಕಳೆದ ಬಾರಿ ಯಥೋಚ್ಚವಾಗಿ ಕ್ಯಾಂಪ್ಕೋ ಸಂಸ್ಥೆ ಅಡಿಕೆ ಖರೀದಿ ಮಾಡಿದ್ದು, ಆದರೆ, ಉತ್ತರ ಭಾರತ ನಿರೀಕ್ಷಿತ ಖರೀದಿ ಮಾಡದೇ ಇರುವ ಹಿನ್ನೆಲೆ ಕಳೆದ ಬಾರಿಯ ಹಳೆಯ ಅಡಿಕೆ ಗೋದಾಮಿನಲ್ಲಿ ಬಾಕಿ ಉಳಿದಿದೆ ಎನ್ನಲಾಗಿದ್ದು, ಹೀಗಾಗಿ,ಖರೀದಿ ಮಾಡಲು ಪಡೆದ ಸಾಲದ ಬಡ್ಡಿಯು ಸಂಸ್ಥೆಗೆ ಹೊರೆಯಾಗಿ ಪರಿಣಮಿಸಿದೆ ಎಂಬ ಸುದ್ದಿ ಹಬ್ಬಿದೆ. ಇದರಿಂದ ಈ ಪರಿಸ್ಥಿತಿಯಲ್ಲಿ ಕ್ಯಾಂಪ್ಕೋ ಸಂಸ್ಥೆ ಅಡಿಕೆ ಬೆಳೆಗಾರರ ನೆರವಿಗೆ ಮುಂದಾಗುವುದೇ ಎಂಬ ಪ್ರಶ್ನೆ ಸಹಜವಾಗಿ ರೈತರಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: ಖಾಸಗಿ ಬಸ್‌ನಲ್ಲಿ ವಕೀಲೆಗೆ ಕಿರುಕುಳ ಪ್ರಕರಣ : ಬಸ್ ಚಾಲಕ ,ನಿರ್ವಾಹಕನ ಬಂಧನ

You may also like

Leave a Comment