Home » Kisan Credit Card: ರೈತರೇ ನಿಮಗೊಂದು ಸಿಹಿ ಸುದ್ದಿ- ನೀವು ಈ ಕಾರ್ಡ್ ಹೊಂದಿದ್ದೀರಾ? ಹಾಗಿದ್ರೆ ಸುಲಭದಲ್ಲಿ ಸಿಗಲಿದೆ ನಿಮಗೆ ಸಾಲ !!

Kisan Credit Card: ರೈತರೇ ನಿಮಗೊಂದು ಸಿಹಿ ಸುದ್ದಿ- ನೀವು ಈ ಕಾರ್ಡ್ ಹೊಂದಿದ್ದೀರಾ? ಹಾಗಿದ್ರೆ ಸುಲಭದಲ್ಲಿ ಸಿಗಲಿದೆ ನಿಮಗೆ ಸಾಲ !!

1 comment
Kisan Credit Card

Kisan Credit Card: ರೈತರಿಗೆ(Farmers)ನೆರವಾಗುವ ನಿಟ್ಟಿನಲ್ಲಿ ಕೇಂದ್ರ(Central Government)ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದು ಕೃಷಿ ಚಟವಟಿಕೆಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಇದೀಗ, ಪ್ರಧಾನಮಂತ್ರಿ ಮೋದಿಯವರು ರೈತರಿಗೆ ಭರ್ಜರಿ ಶುಭ ಸುದ್ದಿ ನೀಡಿದ್ದಾರೆ.

ಕೇಂದ್ರ ಸರ್ಕಾರ ರೈತರಿಗೆ ಗುಡ್ ನ್ಯೂಸ್ ನೀಡಿದ್ದು, ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card)ಮೂಲಕ ಸಾಲ ಪಡೆಯುವುದು ಇದೀಗ ತುಂಬಾ ಸರಳ ಹಾಗೂ ಸುಲಭವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಬ್ಸಿಡಿ ಸಾಲಗಳನ್ನು ಪಡೆಯಲು ಸಹಾಯ ಮಾಡಲು ‘ಕಿಸಾನ್ ಲೋನ್ ಪೋರ್ಟಲ್’ ಅನ್ನು ಇಂದು ಉದ್ಘಾಟನೆ ಮಾಡಲಿದ್ದಾರೆ.

ಭಾರತ ಸರ್ಕಾರದಿಂದ ನಡೆಸಲ್ಪಡುವ ಯೋಜನೆಯಾಗಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ರೈತರಿಗೆ ಸಾಲ ಮತ್ತು ಕೃಷಿಗೆ ಸಂಬಂಧಿಸಿದ ಹಣಕಾಸು ಸೇವೆಗಳನ್ನು ನೀಡುತ್ತದೆ. ಈ ಯೋಜನೆಯ ಮೂಲಕ ರೈತರಿಗೆ ವ್ಯಾಪಾರ ಸಾಲ ಮತ್ತು ಕೃಷಿಗೆ ಸಂಬಂಧಿಸಿದ ವಿವಿಧ ಹಣಕಾಸು ಸೇವೆಗಳ ಪ್ರಯೋಜನವನ್ನು ನೀಡಲಾಗುತ್ತದೆ.ಈ ಹಣಕಾಸು ವರ್ಷದ ಏಪ್ರಿಲ್ ಆಗಸ್ಟ್ ಅವಧಿಯಲ್ಲಿ ಸರ್ಕಾರವು 6,573.50 ಕೋಟಿ ರೂ.ಗಳ ಕೃಷಿ ಸಾಲವನ್ನು ರಿಯಾಯಿತಿ ಬಡ್ಡಿದರದಲ್ಲಿ ವಿತರಿಸಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಲಾಭವು ಕೃಷಿಯಿಂದ ಮುಖ್ಯ ಕಮಿಷನ್ ಹೊಂದಿರುವ ಜೊತೆಗೆ ಕೃಷಿಗೆ ಸಂಬಂಧಿಸಿದ ವಿವಿಧ ಹಣಕಾಸಿನ ಅಗತ್ಯಗಳನ್ನು ಹೊಂದಿರುವ ವ್ಯಕ್ತಿಗಳಿಗೆ ದೊರೆಯುತ್ತದೆ.ಕೆಸಿಸಿಯು ಹೆಚ್ಚಿನ ಪ್ರಯೋಜನ ನೀಡುವ ನಿಟ್ಟಿನಲ್ಲಿ ಮನೆ-ಮನೆ ಅಭಿಯಾನವು ಕೇಂದ್ರ ಯೋಜನೆ ‘ಪಿಎಂ-ಕಿಸಾನ್’ ನ ಕೆಸಿಸಿ ಅಲ್ಲದ ಹೋಲ್ಡರ್ ಗಳನ್ನು ತಲುಪಲಿದೆ. ಇದರ ಅಡಿಯಲ್ಲಿ ಗುರುತಿಸಲಾದ ಪ್ರತಿ ಫಲಾನುಭವಿ ರೈತನ ಬ್ಯಾಂಕ್ ಖಾತೆಗೆ ವರ್ಷಕ್ಕೆ 6,000 ರೂ.ದೊರೆಯಲಿದೆ. ಈ ಯೋಜನೆಯು ಹೆಚ್ಚು ಕೇಂದ್ರೀಕೃತ ಮತ್ತು ಪರಿಣಾಮಕಾರಿ ಕೃಷಿ ಸಾಲಕ್ಕಾಗಿ ಬ್ಯಾಂಕುಗಳೊಂದಿಗೆ ತಡೆರಹಿತ ಏಕೀಕರಣವನ್ನು ಉತ್ತೇಜನ ನೀಡುತ್ತದೆ.

ಇದನ್ನೂ ಓದಿ: Crime News: ಅಬ್ಬಬ್ಬಾ. ಒಟ್ಟೊಟ್ಟಿಗೆ 16 ಕಂಪನಿಯಲ್ಲಿ ಕೆಲ್ಸ ಮಾಡ್ತಿದ್ದ ಮಹಿಳೆ! ಇವಳೇನು ಮನುಷ್ಯಳೋ ಇಲ್ಲ ಮಷಿನ್ನೋ?

You may also like

Leave a Comment