Home » PM kisan Yojana: ರೈತರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್- ಮತ್ತಷ್ಟು ಹೊಸ ಸೇವೆ ಒದಗಿಸಲು ರೆಡಿಯಾದ ಕೇಂದ್ರ

PM kisan Yojana: ರೈತರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್- ಮತ್ತಷ್ಟು ಹೊಸ ಸೇವೆ ಒದಗಿಸಲು ರೆಡಿಯಾದ ಕೇಂದ್ರ

1 comment
PM kisan Yojana

PM Kisan Yojana: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM Kisan Scheme Latest News) ಸರ್ಕಾರವು ರೈತರಿಗೆ ವಾರ್ಷಿಕ 6000 ರೂ. ಒದಗಿಸುತ್ತಿದ್ದು, ಯೋಜನೆಯ ಭಾಗವಾಗಿ ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ರವಾನೆ ಮಾಡಲಾಗಿದ್ದು, ಇದೀಗ ಪಿಎಂ ಕಿಸಾನ್ (PM Kisan Yojana)ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ(PM Kisan Samman Nidhi) ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದ್ದು, ಹೊಸ ಸೇವೆಗಳನ್ನು ನೀಡಲಾಗಿದೆ. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಇತ್ತೀಚೆಗೆ AI ಚಾಟ್ ಬಾಟ್ ಸೇವೆಗಳಿಗೆ ಚಾಲನೆ ನೀಡಿದ್ದಾರೆ. ಕೇಂದ್ರ ಸರ್ಕಾರವು ನೀಡುವ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಈ ಸೇವೆಗಳು ಲಭ್ಯವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.ಎಕ್ಸ್‌ಸ್ಟೆಪ್ ಫೌಂಡೇಶನ್ ಮತ್ತು ಭಾಷಿನಿಯ ಬೆಂಬಲದೊಂದಿಗೆ AI ಚಾಟ್ ಬೋಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ರೈತರು PM ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ AI ಚಾಟ್‌ಬಾಟ್ ಸೇವೆಗಳನ್ನು ಪಡೆಯಬಹುದಾಗಿದ್ದು, ಪಿಎಂ ಕಿಸಾನ್ ಆಪ್ ಅನ್ನು ಮೊಬೈಲ್ ನಲ್ಲಿ ಡೌನ್‌ಲೋಡ್ ಮಾಡಬೇಕಾಗುತ್ತದೆ. ಪಿಎಂ ಕಿಸಾನ್ ಫಲಾನುಭವಿಗಳು ವಿವಿಧ ಭಾಷೆಗಳಲ್ಲಿ ಚಾಟ್ ಬೋಟ್ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕೇಂದ್ರ ಸಚಿವಾಲಯ ಜಾರಿಗೆ ತಂದಿರುವ ಹೊಸ ಸೇವೆ AI ಚಾಟ್‌ಬಾಟ್ ಮೂಲಕ PM ಕಿಸಾನ್ ಯೋಜನೆಯ ದಕ್ಷತೆ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವ ಸಲುವಾಗಿ ಒಂದು ಪ್ರಮುಖ ಪ್ರಶ್ನೆಯನ್ನು ಕೇಳಲಾಗುತ್ತದೆ. ಈ ವೇಳೆ ರೈತರು ತಮ್ಮ ಪ್ರಶ್ನೆಗಳಿಗೆ ತ್ವರಿತವಾಗಿ ಜೊತೆಗೆ ಸ್ಪಷ್ಟ ಮತ್ತು ನಿಖರವಾದ ಮಾಹಿತಿಯನ್ನು ಪಡೆಯಬಹುದು.ಕುಂದುಕೊರತೆ ನಿರ್ವಹಣಾ ವ್ಯವಸ್ಥೆಯಲ್ಲಿ ಎಐ ಚಾಟ್‌ಬಾಟ್ ಸೇವೆಗಳ ಮೂಲಕ ರೈತರು ಸಾಕಷ್ಟು ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತದೆ.

ಹೊಸದಾಗಿ ಪ್ರಾರಂಭಿಸಲಾದ AI ಚಾಟ್‌ಬಾಟ್ ಪ್ರಸ್ತುತ ಇಂಗ್ಲಿಷ್, ಹಿಂದಿ, ಬಂಗಾಳಿ, ಒಡಿಯಾ ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಈ ಸೇವೆಗಳು ದೇಶದ ಎಲ್ಲಾ 22 ಅಧಿಕೃತ ಭಾಷೆಗಳಲ್ಲಿ ಲಭ್ಯವಾಗಲಿದೆ. ಸುಧಾರಿತ ತಂತ್ರಜ್ಞಾನದೊಂದಿಗೆ ಈ ಸೇವೆಗಳನ್ನು ತರಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದ್ದು, ಇದು ರೈತರಿಗೆ ಪಾರದರ್ಶಕತೆಯನ್ನು ಮತ್ತು ಸರಿಯಾದ ಮಾಹಿತಿಯೊಂದಿಗೆ ನಿಖರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ. AI ಚಾಟ್ ಬೋಟ್‌ಗೆ ಸಂಬಂಧಿಸಿದಂತೆ, ರೈತರು ತಮ್ಮ ಅರ್ಜಿಯ ಸ್ಥಿತಿ, ಪಾವತಿ ವಿವರಗಳು, ಅನರ್ಹ ಸ್ಥಿತಿ ಮತ್ತು ಇತರ PM ಕಿಸಾನ್ ಯೋಜನೆ ಸಂಬಂಧಿತ ನವೀಕರಣಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: Rakshith Shetty: ಸದ್ಯದಲ್ಲೇ ನಟ ರಕ್ಷಿತ್ ಶೆಟ್ಟಿ ಮದುವೆ ?! ಇವರೇನಾ ಸಿಂಪಲ್ ಸ್ಟಾರ್ ಕೈ ಹಿಡಿಯೋ ಲಕ್ಕಿ ಗರ್ಲ್ ?!

You may also like

Leave a Comment