Arecanut Price: ಈ ಭಾರಿ ಅಡಿಕೆಯಲ್ಲಿ ನಿರೀಕ್ಷಿತ ಪ್ರಮಾಣದ ಪೂರೈಕೆ ಇಲ್ಲದಿರುವುದು ಮತ್ತು ಅತಿಯಾದ ಬಿಸಿಲಿನ ಪರಿಣಾಮದಿಂದಾಗಿ ಮುಂದಿನ ವರ್ಷ ಶೇ.50ರಷ್ಟು ಫಸಲು ಕಡಿಮೆಯಾಗುವ ಸಾಧ್ಯತೆ ಇದ್ದು, ಇದೀಗ ಅಡಿಕೆಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗಿದೆ.
ಇದನ್ನೂ ಓದಿ: New Law implementation: ಜುಲೈ 1 ರಿಂದ ದೇಶದಾದ್ಯಂತ ಮೂರು ಹೊಸ ಕಾನೂನು ಜಾರಿ : ಅವು ಯಾವುವು ಗೊತ್ತಾ? : ಇಲ್ಲಿ ನೋಡಿ
ಈ ಹಿನ್ನಲೆ ಮಂಗಳೂರು ಮಾರುಕಟ್ಟೆಯಲ್ಲಿ(Manglore Market) ಚಾಲಿ ಅಡಿಕೆ ಧಾರಣೆ ಹೆಚ್ಚಾಗಿದ್ದು ಡಬ್ಬಲ್ ಚೋಲ್, ಸಿಂಗಲ್ ಚೋಲ್ ಧಾರಣೆ 500 ರು. ಹೆಚ್ಚಿನ ದರಕ್ಕೆ ಮಾರಾಟ ವಾಗುತ್ತಿದೆ.
ಮೇ 15ರಂದು ಡಬ್ಬಲ್ ಚೋಲ್ ಅಡಿಕೆ (Arecanut)ಕೆ.ಜಿ.ಗೆ 490 ರು. ಇದ್ದರೆ, ಸಿಂಗಲ್ ಚೋಲ್‌ಗೆ 480 ರು. ದಾಖಲಿಸಿತ್ತು. ಹೊಸ ಅಡಿಕೆ(New Arecanut) ಧಾರಣೆ ಕೆ.ಜಿ.ಗೆ 400 ರು. ಗಡಿಗೆ ತಲುಪಿದೆ. ಮೇ 15ರಂದು ಹೊರ ಮಾರುಕಟ್ಟೆಯಲ್ಲಿ 390 ರೂ. ತನಕ ಖರೀದಿಯಾಗಿದೆ.
ಕ್ಯಾಂಸ್ಕೋ ಮಾರುಕಟ್ಟೆಯಲ್ಲಿನ ಧಾರಣೆ ನೋಡುವುದಾದರೆ ಹೊಸ ಅಡಿಕೆಗೆ ಮಾತ್ರ ಬೇಡಿಕೆ ಇರುವುದು ಕಂಡುಬಂದಿದೆ. ಮೇ 15ರಂದು ಹೊಸ ಅಡಿಕೆಗೆ 380 ರು. ಸಿಂಗಲ್ ಚೋಲ್ ಅಡಿಕೆಗೆ 465 ರು. ಡಬ್ಬಲ್ ಚೋಲ್ ಅಡಿಕೆಗೆ 475 ರು. ದಾಖಲಾಗಿದೆ.
