Home » ದ.ಕ ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆ !! | ಬೆಳ್ಳಂಬೆಳಗ್ಗೆ ಸುರಿದ ಮಳೆಗೆ ಅಡಿಕೆ ಕೃಷಿಕರು ಕಂಗಾಲು

ದ.ಕ ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆ !! | ಬೆಳ್ಳಂಬೆಳಗ್ಗೆ ಸುರಿದ ಮಳೆಗೆ ಅಡಿಕೆ ಕೃಷಿಕರು ಕಂಗಾಲು

0 comments

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ವಿವಿಧೆಡೆ ಇಂದು ಬೆಳಗ್ಗೆ ಅಕಾಲಿಕ ಮಳೆಯಾಗಿದ್ದು, ಅಡಿಕೆ ಕೃಷಿಕರು ತತ್ತರಗೊಂಡಿದ್ದಾರೆ.

ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ವಿಟ್ಲ, ಈಶ್ವರಮಂಗಲ, ಇಡಿದು ಮೊದಲಾದ ಕಡೆ ಮಳೆಯಾಗಿದೆ. ಅಡಕೆ ಕೃಷಿಕರ ಅಂಗಳದಲ್ಲಿ ಅಡಿಕೆ ಒಣಗಲು ಹಾಕಿರುವುದರಿಂದ ಅದು ಮಳೆಗೆ ಒದ್ದೆಯಾಗಿದೆ.

ಎರಡು ದಿನಗಳ ಹಿಂದೆ ಸುಬ್ರಹ್ಮಣ್ಯ, ಬೆಳ್ಳಾರೆ, ಉಪ್ಪಿನಂಗಡಿ ಮೊದಲಾದ ಕಡೆ ಏಕಾಏಕಿ ರಾತ್ರಿ ವೇಳೆ ಮಳೆಯಾಗಿತ್ತು. ಇದೀಗ ಈ ಅಕಾಲಿಕ ಮಳೆ ಜಿಲ್ಲೆಯ ಕೃಷಿಕರನ್ನು ಆತಂಕಕ್ಕೆ ತಳ್ಳಿದೆ.

You may also like

Leave a Comment