Home » ತಮಿಳುನಾಡಿನ ರೈತನೊಬ್ಬನ ಕೈ ಚಳಕ : ಭತ್ತದ ಗದ್ದೆಯಲ್ಲಿ ಮೂಡಿ ಬಂತು ತಿರುವಳ್ಳುವರ್ ಚಿತ್ರ

ತಮಿಳುನಾಡಿನ ರೈತನೊಬ್ಬನ ಕೈ ಚಳಕ : ಭತ್ತದ ಗದ್ದೆಯಲ್ಲಿ ಮೂಡಿ ಬಂತು ತಿರುವಳ್ಳುವರ್ ಚಿತ್ರ

0 comments

ತಂಜಾವೂರು : ಇಲ್ಲಿನ ಮಲೈಪ್ಪ ನವೂರಿನಲ್ಲಿ ರೈತ ಇಳಂಗೋವಾನ್ ಎನ್ನುವವರು ಭತ್ತದ ಗದ್ದೆಯಲ್ಲಿ ತನ್ನ ಕೈ ಚಳಕ ತೋರಿಸಿ, ತಮಿಳು ಕವಿ ತಿರುವಳ್ಳುರವರ ಚಿತ್ರ ಮೂಡಿ ಬರುವಂತೆ ಗದ್ದೆಯಲ್ಲಿ ನಾಟಿ ಮಾಡಿದ್ದಾರೆ.

ಹಲವು ವರ್ಷಗಳಿಂದ ನಾನು ಸಾವಯವ ಕೃಷಿ ಮಾಡುತ್ತಿದ್ದೇನೆ. ತಿರುವಳ್ಳುವರ್ ಸಾವಯವ ಕೃಷಿ ಬಗ್ಗೆ ಬರೆದಿದ್ದಾರೆ. ಅದಕ್ಕಾಗಿಯೇ ನಾನು 2 ವಿಧದ ಭತ್ತದ ತಳಿಯೊಂದಿಗೆ ತಿರುವಳ್ಳುವರ್ ಅವರ ಚಿತ್ರ ಮಾಡಿದ್ದೇನೆ ಎಂದು ಇಳಂಗೋವಾನ್ ಹೇಳಿದ್ದಾರೆ.

ರೈತರಾದವರು ಕಲಾಕಾರರು ಆಗಿದ್ದರೆ, ಗದ್ದೆಯಲ್ಲಿ ಕನ್ವಸ್ ಭತ್ತದ ಬೀಜವೇ ಕುಂಚ… ಗದ್ದೆಯಲ್ಲಿಯೂ ಮೂಡಿ ಬರುವುದು ಸುಂದರ ಕಲಾ ಚಿತ್ರ ಎಂಬುದನ್ನು ಇಳಂಗೋವಾನ್ ಅವರು ತೋರಿಸಿ ಕೊಟ್ಟಿದ್ದಾರೆ. ಅಲ್ಲದೆ, ಇಳಂಗೋವಾನ್ ಅವರು ತಮ್ಮ ಕೃಷಿಯಲ್ಲಿ ಯಾವ ರೀತಿಯ ಕಲಾ ಕೃತಿ ಕೂಡ ಮಾಡಬಹುದು ಎಂದು ತಿಳಿಸಿದ್ದಾರೆ.

You may also like

Leave a Comment