Home » Farmers : ರೈತರೇ ಗಮನಿಸಿ, ಬೋರ್ ವೆಲ್ ಕೊರೆಸಲು ಹಣ ಪಾವತಿಯ ಬಗ್ಗೆ ಮಹತ್ವದ ಮಾಹಿತಿ!

Farmers : ರೈತರೇ ಗಮನಿಸಿ, ಬೋರ್ ವೆಲ್ ಕೊರೆಸಲು ಹಣ ಪಾವತಿಯ ಬಗ್ಗೆ ಮಹತ್ವದ ಮಾಹಿತಿ!

0 comments

Ganga Kalyana scheme : ರಾಜ್ಯ ಸರ್ಕಾರ ರೈತರಿಗೆ (farmers) ಮತ್ತೊಂದು ಗುಡ್ ನ್ಯೂಸ್ ನೀಡಿದೆ. ರೈತರ ಕೃಷಿ ಭೂಮಿಗೆ ಬೇಕಾದ ನೀರಾವರಿ ವ್ಯವಸ್ಥೆಗೆ ನೆರವು ನೀಡಲು ಯೋಜಿಸಿದೆ. ಈ ಹಿನ್ನೆಲೆ ‘ಗಂಗಾ ಕಲ್ಯಾಣ ಯೋಜನೆ’ಯಡಿ (ganga Kalyana scheme) ಕೊಳವೆಬಾವಿ (borewell) ಕೊರೆಸಲು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.

ಸಚಿವರು ಇಂದು (ಫೆ.20) ಕಳತ್ತೂರಿಗೆ ಭೇಟಿ ನೀಡಿ, 25 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣವನ್ನು ಉದ್ಘಾಟಿಸಿದರು. ಈ ವೇಳೆ ಸಚಿವರು, ರೈತರಿಗೆ (farmers) ಅನುಕೂಲವಾಗಲು, ಬೋರ್ ವೆಲ್ ಕೊರೆಸಲು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಬಗ್ಗೆ ಮಾತನಾಡಿದ್ದಾರೆ.

ಈ ಮೊದಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಬೋರ್ ವೆಲ್ ಕೊರೆಯಲು ಟೆಂಡರ್ ಕರೆಯಲಾಗುತ್ತಿತ್ತು. ಆದರೆ, ಇದೀಗ ಬೋರ್ ವೆಲ್ ಕೊರೆಯಲು ಮೊತ್ತವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಪಾರದರ್ಶಕತೆಯೊಂದಿಗೆ ಫಲಾನುಭವಿಗೆ ಬೇಗನೆ ಬೋರ್ವೆಲ್ ಸಂಪರ್ಕ ದೊರೆಯುತ್ತಿದೆ ಎಂದು ಹೇಳಿದರು.

ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ರೈತರಿಗೆ ಆರ್ಥಿಕ ಸಹಕಾರ ದೊರೆತು, ಬೊರ್ ವೆಲ್ ಕೊರೆಯಲು ಸಹಕಾರಿಯಾಗಲಿದೆ.

You may also like

Leave a Comment