Arecanut price: ಮಳೆ, ಕೊಳೆಯಿಂದಾದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಅಡಿಕೆ ಬೆಳೆಗಾರರು ಸದ್ಯ ಕೆಲವು ವಾರಗಳಿಂದ ಫುಲ್ ಖುಸಿಯಲ್ಲಿದ್ದಾರೆ. ಅಡಿಕೆ ಧಾರಣೆ(Arecanut price) ಏರುಗತಿಯಲ್ಲಿದ್ದು ಒಂದು ಪವನ್ ಚಿನ್ನದ ಬೆಲೆಯನ್ನೇ ಮೀರಿಸಿದೆ.
ಹೌದು, ದಾವಣಗೆರೆ(Davangere) ಅಡಿಕೆ ಧಾರಣೆಯಲ್ಲಿ (ಜು10) ದಿನದಿಂದ ದಿನಕ್ಕೆ ಭಾರೀ ಚೇತರಿಕೆ ಕಂಡಿದ್ದು, ಅಡಿಕೆಗೆ ಜಾಕ್ ಪಾಟ್ ಬೆಲೆ ಬಂದಿದ್ದು, ಕ್ವಿಂಟಾಲ್(Kwintal) ಗೆ ಬರೋಬ್ವರಿ 57,199 ರೂ. ತಲುಪಿದೆ. ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇ ನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಇದೀಗ 57 ಸಾವಿರ ಗಡಿ ದಾಟಿದೆ. ಕಳೆದ ವರ್ಷ ಗರಿಷ್ಠ 60 ಸಾವಿರಕ್ಕೆ ಮಾರಾಟವಾಗಿತ್ತು. ಈ ವರ್ಷವು ಸಹ 60 ಸಾವಿರ ಸಮೀಪ ಬಂದಿರುವುದು ರೈತರ ಮೊಗದಲ್ಲಿ ಸಂತಸ ಮೂಡಿದೆ.
ಅಂದಹಾಗೆ ಜುಲೈ(July) 10ರಂದು ಉತ್ತಮ ರಾಶಿ ಅಡಿಕೆ ಗರಿಷ್ಠ ಬೆಲೆ 57,199 ರೂ.ಗೆ ಮಾರಾಟವಾಗಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದರೆ 800 ರೂ. ಏರಿಕೆ ಕಂಡಿದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ(Channagairi) ಅಡಿಕೆ ವಹಿವಾಟಿನಲ್ಲಿ ಜು.10ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 53,099 ಗರಿಷ್ಠ ಬೆಲೆ 57,199 ಹಾಗೂ ಸರಾಸರಿ ಬೆಲೆ 55,226 ರೂ. ಆಗಿದೆ. ಬೆಟ್ಟೆ ಅಡಿಕೆ ಗರಿಷ್ಠ 42,879 ರೂ.ಗೆ ಮಾರಾಟವಾಗಿದೆ.
ಇನ್ನು ಶಿವಮೊಗ್ಗ(Shivamogga) ಮಾರುಕಟ್ಟೆಯಲ್ಲಿ 56 ಸಾವಿರ ದಾಟಿದ ಅಡಿಕೆ ದರ ದಾವಣಗೆರೆ ಮಾರುಕಟ್ಟೆಯಲ್ಲಿ ಕೊಂಚ ಹೆಚ್ಚಾಗಿ 57 ಸಾವಿರ ಆಗಿದೆ. ಈ ವರ್ಷದ ಆರಂಭದಿಂದ ಸ್ಥಿರವಾಗಿದ್ದ ಅಡಿಕೆ ಧಾರಣೆ ಜೂನ್ ತಿಂಗಳಿನಿಂದ ಹೆಚ್ಚಳವಾಗಲು ಆರಂಭಿಸಿದೆ. ಈಗ 57 ಸಾವಿರ ರೂಪಾಯಿ ದಾಟಿದ್ದು ದರ ಇನ್ನೂ ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಅಲ್ಲದೆ 10 ವರ್ಷಗಳ ಹಿಂದೆ ಅಡಿಕೆ ಧಾರಣೆ 80 ಸಾವಿರ ತಲುಪಿದ್ದು ಈವರೆಗಿನ ದಾಖಲೆಯಾಗಿತ್ತು ಎಂಬುದನ್ನೂ ನಾವಿಲ್ಲಿ ನೆನೆಯಬೇಕು.
ಜುಲೈ 10ರಂದು ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣ

ಇದನ್ನೂ ಓದಿ : Asha workers salary: ಆಶಾ ಕಾರ್ಯಕರ್ತೆಯರಿಗೆ ಬಿಗ್ ಶಾಕ್- ವೇತನವೂ ಇಲ್ಲ, ಪೆನ್ಶನ್ನೂ ಇಲ್ಲ ಎಂದು ಉಲ್ಟಾ ಹೊಡೆದ ಸರ್ಕಾರ !!
