Home » Gurantee Scheme: ರೈತರೇ, ಇನ್ಮುಂದೆ ನಿಮ್ಮ ಕೃಷಿ ಜಮೀನುಗಳಿಗಿಲ್ಲ ಈ ಸೌಲಭ್ಯ – ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ !!

Gurantee Scheme: ರೈತರೇ, ಇನ್ಮುಂದೆ ನಿಮ್ಮ ಕೃಷಿ ಜಮೀನುಗಳಿಗಿಲ್ಲ ಈ ಸೌಲಭ್ಯ – ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ !!

1 comment
Gurantee Scheme

Guarantee Scheme: ರೈತರಿಗೆ ಸರ್ಕಾರ ಶಾಕಿಂಗ್ ನ್ಯೂಸ್ ನೀಡಿದೆ. ಕೂಲಿಕಾರರು ಗ್ಯಾರಂಟಿ ಯೋಜನೆಗೆ (Guarantee Scheme) ಹಣ ಹೊಂದಿಸಲು ಒದ್ದಾಡುತ್ತಿರುವ ನಡುವೆ ಸರ್ಕಾರ ರೈತರಿಗೆ (Farmers) ಶಾಕ್ ನೀಡಿದೆ. ಹೌದು!!ರೈತರ‌ ಪಂಪ್ ಸೆಟ್‌ಗಳಿಗೆ (Pumpset) ಟ್ರಾನ್ಸ್‌ಫರ್ಮರ್‌ (Transformer) ಸಹಿತ ಮೂಲ ಸೌಲಭ್ಯ ಒದಗಿಸುವ ಯೋಜನೆಯನ್ನು ರದ್ದು ಮಾಡಲಾಗಿದೆ.

ಕಳೆದ 10 ವರ್ಷದಿಂದ ಅಕ್ರಮ – ಸಕ್ರಮ ಯೋಜನೆ ಜಾರಿಯಲ್ಲಿದ್ದು, ಪಂಪ್‌ಸೆಟ್ ಮೂಲಕ ನೀರಾವರಿ ಮಾಡುವ ರೈತರಿಗೆ ಇಂಧನ ಇಲಾಖೆಯ ಈ ಯೋಜನೆ ನೆರವಾಗುತ್ತಿತ್ತು. ರೈತರು ಸುಮಾರು 20 ಸಾವಿರ ರೂ. ಶುಲ್ಕ ಪಾವತಿಸಿ ನೀರಾವರಿ ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಪಡೆಯಲು ಪರವಾನಗಿ ಪಡೆದರೆ, ವಿದ್ಯುತ್ ಕಂಪನಿಗಳೇ ಆ ರೈತನ ಹೊಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ ಈಗ ರೈತರು ಸ್ವತಃ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ಸ್ಪಷ್ಟವಾಗಿ ಆದೇಶ ನೀಡಿದೆ.

ಇಂಧನ ಇಲಾಖೆಯ ಅಧೀನ ಕಾರ್ಯದರ್ಶಿ ಡಿ.ಎಂ.ವಿನೋದ್ ಕುಮಾರ ಕಳೆದ ಅಕ್ಟೋಬರ್ 7 ರಂದು ಈ ಕುರಿತು ಆದೇಶ ಹೊರಡಿಸಿದ್ದಾರೆ. 3ರ ಸೆ.22ರ ನಂತರ ನೋಂದಣಿ ಆಗುವ ನೀರಾವರಿ ಪಂಪ್ ಸೆಟ್‌ಗಳಿಗೆ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಮೂಲ ಸೌಲಭ್ಯ ಪಡೆಯಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರದ ಈ ಹೊಸ ಆದೇಶದ ಪರಿಣಾಮ ರೈತರು ತಮ್ಮ ನೀರಾವರಿ ಪಂಪ್ ಸೆಟ್‌ ವಿದ್ಯುತ್ ‌ಪಡೆಯಲು‌ ಲಕ್ಷಾಂತರ ರೂ. ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ: Pension Holders: ಪಿಂಚಣಿದಾರರೇ, ಮಿಸ್ ಮಾಡ್ದೆ ಆನ್ಲೈನ್ ಅಲ್ಲಿ ಈ ದಾಖಲೆ ಸಲ್ಲಿಸಿ !!

Oo

You may also like

Leave a Comment