Government facilities for farmers: ರಾಜ್ಯದಲ್ಲಿ ಸರ್ಕಾರ(Karnataka Government) ತನ್ನ 5 ಗ್ಯಾರಂಟಿಗಳ ಜಾರಿಗೆ ತಯಾರಿ ನಡೆಸುತ್ತಿದ್ದರೂ ಕೂಡ ಇತರ ಜನೋಪಯೋಗಿ ಯೋಜನೆಗಳಿಗೂ ಚಿಂತನೆ ನಡೆಸಿ, ಅವುಗಳ ಜಾರಿಗೂ(Government facilities for farmers) ತಯಾರಿ ನಡೆಸಿದೆ. ಅಂತೆಯೇ ಇದೀಗ ಸರ್ಕಾರವು ರಾಜ್ಯದ ರೈತರಿಗೆ(Formers) ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಹೌದು, ಶಕ್ತಿ ಯೋಜನೆ(Shakthi yojane)ಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ, ಗೃಹ ಲಕ್ಷ್ಮೀ(Gruha lakshmi) ಯೋಜನೆಯಡಿ ಮನೆ ಯಜಮಾನಿಗೆ ಹಣ ನೀಡಲು ತಯಾರಿ ನಡೆಸುತ್ತಿರುವ ನಡುವೆಯೇ ಸರ್ಕಾರವು ರಾಜ್ಯದ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಶೀಘ್ರದಲ್ಲೇ ರೈತರ ಪಂಪ್ ಸೆಟ್(Pump set) ಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಾಗಲಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.
ಅಂದಹಾಗೆ ಸದ್ಯ ಬೆಂಗಳೂರಿನ ವಿಧಾನಸೌಧದಲ್ಲಿ(Vidhanasowdha) ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದು, ಈ ಕಲಾಪದ ವೇಳೆ ಮಾತನಾಡಿದ ಸಚಿವರು ಶೀಘ್ರದಲ್ಲೇ ರೈತರ ಪಂಪ್ ಸೆಟ್ ಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಾಗಲಿದೆ , ರೈತರು ಪಂಪ್ ಸೆಟ್ ಗಳಿಗೆ ಸೌರ್ ವಿದ್ಯುತ್ ಕಲ್ಪಿಸಿಕೊಳ್ಳಲು ಸುಮಾರು 4.5 ಲಕ್ಷ ರೂ ಖರ್ಚಾಗಬಹುದು. ಆದರೆ ಇದರಲ್ಲಿ ಸುಮಾರು 3.5 ಲಕ್ಷದಷ್ಟು ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರವೇ(Central and state Government) ನೀಡುತ್ತದೆ ಎಂದಿದ್ದಾರೆ.
ಅಲ್ಲದೆ ಉಳಿದ 1 ಲಕ್ಷವನ್ನು ಬ್ಯಾಂಕ್ ಮೂಲಕ ನೀಡುವ ಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ನಮ್ಮ ಸರ್ಕಾರ ರೈತರ ಕೃಷಿ ಪಂಪ್ಸೆಟ್ಗಳಿಗೆ ಸಹಾಯ ಧನದ ರೂಪದಲ್ಲಿ 16 ಸಾವಿರ ಕೋಟಿ ರೂ. ನೀಡಲು ಚಿಂತನೆ ನಡೆಸಿದೆ. ಅಲ್ಲದೆ ಇದನ್ನು ಅತಿ ಶೀಘ್ರದಲ್ಲಿ ಜಾರಿ ಮಾಡುತ್ತೇವೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್(K J George) ಹೇಳಿದರು.
