Home » Bagar Hukum: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರದ ರವಾಣೆಗೆ ಗ್ರೀನ್ ಸಿಗ್ನಲ್!

Bagar Hukum: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರದ ರವಾಣೆಗೆ ಗ್ರೀನ್ ಸಿಗ್ನಲ್!

0 comments
Bagar hukum

Bagar Hukum: ಬಗರ್ ಹುಕುಂ (Bagar Hukum) ಅಥವಾ ಕೃಷಿ ಜಮೀನು ಅಕ್ರಮ ಸಕ್ರಮ ಅಂದರೆ ಅನಾದಿ ಕಾಲದಿಂದ ರೈತರು ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದು, ಅವರ ಹೆಸರಿಗೆ ಖಾತೆ ಆಗಿರುವುದಿಲ್ಲ. ಇಂತಹ ಜಮೀನುಗಳನ್ನು ನಿಯಮ ಪ್ರಕಾರ ಕೃಷಿ ಮಾಡುವ ರೈತನಿಗೆ ಕೆಲವು ನಿಬಂಧನೆ ಪ್ರಕಾರ ಖಾತೆ ಮಾಡಿಕೊಡುವುದಾಗಿದೆ. ಅರ್ಥಾತ್, ಅಕ್ರಮ ಸಾಗುವಳಿಯನ್ನು ಸಕ್ರಮ ಮಾಡುವುದಾಗಿದೆ.

ಸದ್ಯ ದಾವಣಗೆರೆಯ ಬಗರ್ ಹುಕುಂ ಸಾಗುವಳಿದಾರರಿಗೆ ಸಿಹಿ ಸುದ್ದಿ ಒಂದನ್ನು ಸಚಿವ ಈಶ್ವರ್ ಖಂಡ್ರೆ ನೀಡಿದ್ದಾರೆ. ಹೌದು, ಶೀಘ್ರವೇ ಬಗರ್ ಹುಕುಂ ಸಾಗುವಳಿ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಈಗಾಗಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿ ಕುರಿತಂತೆ, ಕೃಷ್ಣ ಬೈರೇಗೌಡ ಅವರಿಗೆ ಸುತ್ತೋಲೆ ಕಳುಹಿಸಿದ್ದಾರೆ.

ಬಗರ್ ಹುಕುಂ ಸಮಿತಿ ರಚನೆ ಮಾಡಿ ಬಗರ್ ಹುಕುಂ ಸಾಗುವಳಿಗೆ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಿ ಕಾಲಮಿತಿ ಒಳಗೆ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೆ ಮತಾಂತರ ನಿಷೇಧ ಕಾಯ್ದೆ ಪಡೆದಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರ್ ಖಂಡ್ರೆ, ಸಮಾಜದಲ್ಲಿ ಸಾಮರಸ್ಯ ತರಬೇಕೆಂಬ ಕಾರಣಕ್ಕೆ ಮತಾಂತರ ನಿಷೇಧ ಕಾಯ್ದೆ ಹಿಂಪಡೆದಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Zeeshan Khan: ಕಿಸ್ ಮಾಡಿ ಪ್ಯಾಂಟ್ ಬಿಚ್ಚು ಎಂದ್ರು- ಖ್ಯಾತ ನಟನೋರ್ವನ ಮಾತು! ಯಾರು ಆ ರೀತಿ ಹೇಳಿದ್ದು?

You may also like

Leave a Comment