Home » Tomato – onion price hike: ಮತ್ತೆ ಏರಿಕೆ ಕಂಡ ಈರುಳ್ಳಿ, ಟೊಮೇಟೊ ಬೆಲೆ- 1 ಕೆಜಿ ರೇಟ್ ಕೇಳಿ ಜನ ಶಾಕ್ !!

Tomato – onion price hike: ಮತ್ತೆ ಏರಿಕೆ ಕಂಡ ಈರುಳ್ಳಿ, ಟೊಮೇಟೊ ಬೆಲೆ- 1 ಕೆಜಿ ರೇಟ್ ಕೇಳಿ ಜನ ಶಾಕ್ !!

0 comments
Tomato - onion price hike

Tomato- onion price hike: ಕೆಲವು ತಿಂಗಳಿಂದ ತರಕಾರಿ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದ್ದು ಜನರ ಕೈ ಸುಡುತ್ತಿದೆ. ಕೆಲ ಸಮಯದ ಹಿಂದೆ ಟೊಮೆಟೊ ಬೆಲೆ ಗಗನಕ್ಕೇರಿದ್ದು ಎಲ್ಲಾ ಕೊಳ್ಳುವವರೆಗೂ ಬೆಲೆ ಏರಿಕೆ ಬಿಸಿ ತಟ್ಟಿತ್ತು. ಅಲ್ಲದೆ ಅದರ ಬಳಿಕ ಈರುಳ್ಳಿಯೂ ಕೂಡ ತನ್ನ ಬೆಲೆಯನ್ನು ಏರಿಸಿಕೊಂಡು ಕೊಳ್ಳುವಾಗಲೇ ಕಣ್ಣಲ್ಲಿ ನೀರು ತರಿಸುತ್ತಿತ್ತು. ಆದರೀಗ ಮತ್ತೆ ಈರುಳ್ಳಿ ಮತ್ತು ಟೊಮೆಟೊ ಬೆಲೆಗಳು(Tomato- onion price hike) ಮತ್ತೆ ಗಗನಕ್ಕೆ ಇರುವ ಎಲ್ಲ ಲಕ್ಷಣಗಳು ಕಂಡು ಬಂದಿದೆ.

ಈರುಳ್ಳಿ ಬೆಲೆ:
ರಾಜ್ಯದ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಈಗಲೇ ಬೆಲೆ ಏರಿಳಿತ ಕಾಣುತ್ತಿದೆ. ಕಳೆದ ವಾರ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಈರುಳ್ಳಿ ಬೆಲೆ ಈ ವಾರ ಮತ್ತೆ ಏರಿಕೆಯತ್ತ ಸಾಗುತ್ತಿದ್ದು ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 50-60 ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.

ಇದನ್ನು ಓದಿ: Guidelines For Govt Employees: ಸರ್ಕಾರಿ ನೌಕರರೇ ಗಮನಿಸಿ- ಕೇಂದ್ರದಿಂದ ಬಂದಿದೆ ನಿಮಗೊಂದು ಖಡಕ್ ಎಚ್ಚರಿಕೆ !!

ಟಮೋಟೊ ಬೆಲೆ:
ಕೆಲವು ತಿಂಗಳ ಹಿಂದೆಯ ಟೊಮೋಟೊ ಬೆಲೆ ಏರಿಕೆ ಕೊಳ್ಳುವವರನ್ನು ಬೆಚ್ಚಿ ಬೀಳಿಸಿತ್ತು. ಯಾಕೆಂದರೆ ನೂರರ ಗಡಿ ದಾಟಿ ಈ ಕೆಂಪು ಸುಂದರಿ ಮಾರಾಟವಾಗುತ್ತಿತ್ತು. ಬಳಿಕ ಬೆಲೆ ಇಳಿಕೆಯಾಗಿದ್ದು ಜನ ನಿಟ್ಟುಸಿರು ಬಿಟ್ಟಿದ್ದರು. ಆದರೀಗ ಮತ್ತೆ ಟೊಮೆಟೊ ಬೆಲೆ ಕೂಡ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 30-40 ರೂಪಾಯಿ ಅಂತೆ ಮಾರಾಟವಾಗುತ್ತಿದೆ.

You may also like

Leave a Comment