Home » ಕುರಿ ಸಾಕಾಣಿಕೆ ಮಾಡುವವರಿಗೆ ಸಹಾಯಧನ!! ಅರ್ಜಿ ಸಲ್ಲಿಸಲು ಫೆ. 28 ಕೊನೆ ದಿನ

ಕುರಿ ಸಾಕಾಣಿಕೆ ಮಾಡುವವರಿಗೆ ಸಹಾಯಧನ!! ಅರ್ಜಿ ಸಲ್ಲಿಸಲು ಫೆ. 28 ಕೊನೆ ದಿನ

4 comments
Sheep Goat

Farming Loan: ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ರೈತರಿಗೆ(Farmers) ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. 2022-23 ನೇ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಮೈಸೂರು ನಿಗಮ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ 10+1 ಕುರಿ/ ಮೇಕೆ ಘಟಕ ಸಂಬಂಧ ಪ.ಜಾತಿ-1, ಸಾಮಾನ್ಯ ವರ್ಗದ 4 ಒಟು 5 ಘಟಕಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ಅರ್ಹ ಫಲಾನುಭವಿಗಳು ಸಾಮಾನ್ಯ ವರ್ಗ/ ಪರಿಶಿಷ್ಟ ಜಾತಿಯ 18 ರಿಂದ 60 ವರ್ಷದ ಕೂಲಿ ಕಾರ್ಮಿಕರು, ಕೃಷಿ, ಕಾರ್ಮಿಕರು ಮತ್ತು ಕುರಿ ಸಾಕಾಣಿಕೆಯನ್ನು( Farming Loan) ಒಳಗೊಂಡ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಬಿಪಿಎಲ್ ಪಡಿತರ ಚೀಟಿಯನ್ನು( BPL Card) ಕಡ್ಡಾಯವಾಗಿ ಹೊಂದಿರಬೇಕಾಗಿದ್ದು, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಫಲಾನುಭವಿಗಳು ಆರ್‍ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರ ಒಳಗೊಂಡಿರಬೇಕು. ಅಸಕ್ತರು ಘಟಕ ವೆಚ್ಚ 70 ಸಾವಿರ ಸಹಾಯಧನ ನೀಡಲಾಗಲಿದ್ದು, ಪರಿಶಿಷ್ಟ ಜಾತಿ/ ಸಾಮಾನ್ಯ ವರ್ಗ ಶೇ.50, ಸಹಾಯಧನ 35 ಸಾವಿರ ಫಲಾನುಭವಿಯ ವಂತಿಗೆ 35 ಸಾವಿರ) ಅರ್ಜಿ ಆಹ್ವಾನ ಮಾಡಲಾಗಿದೆ.

ಫೆಬ್ರವರಿ 28 ರೊಳಗೆ ಆಸಕ್ತರು ಇದಕ್ಕೆ ಅರ್ಜಿಯನ್ನು ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ತಾಲ್ಲೂಕಿನ ಪಶು ವೈದ್ಯ ಆಸ್ಪತ್ರೆಗೆ /ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್ ಅವರು ಮಾಹಿತಿ ನೀಡಿದ್ದಾರೆ. ಆಸಕ್ತ ಫಲಾನುಭವಿಗಳು ಈ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳಬಹುದು. ಈ ಕುರಿತ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಪಶು ಆಸ್ಪತ್ರೆ ಮಡಿಕೇರಿ 9448647276, ವಿರಾಜಪೇಟೆ 9141093996, ಪೊನ್ನಂಪೇಟೆ 9449081343, ಸೋಮವಾರಪೇಟೆ 9448655660, ಕುಶಾಲನಗರ 8951404025 ಸಂಪರ್ಕಿಸಬಹುದಾಗಿದೆ.

You may also like

Leave a Comment