PM KISAN 15th Installment: ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 14ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಇದೀಗ 15ನೇ ಕಂತಿಗಾಗಿ(PM KISAN 15th Installment) ರೈತರು ಎದುರು ನೋಡುತ್ತಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ.
ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ ರೈತರು ಪ್ರತಿವರ್ಷ 2,000 ರೂ.ಗಳ ಸಹಾಯವನ್ನು ಪಡೆಯಲಿದ್ದಾರೆ. ವಾರ್ಷಿಕವಾಗಿ 6000 ರೂಪಾಯಿಗಳನ್ನು ನೇರವಾಗಿ ಖಾತೆಗೆ ಕಳುಹಿಸಲಾಗುತ್ತದೆ. ಈ ಯೋಜನೆಗೆ ನೀವಿನ್ನು ಅರ್ಜಿ ಸಲ್ಲಿಸದಿದ್ದರೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಬಹುದು.
ಪಿಎಂ ಕಿಸಾನ್ (PM Kisan)ವೆಬ್ ಸೈಟ್ ಅನುಸಾರ, ಪಿಎಂ ಕಿಸಾನ್ ನೋಂದಾಯಿತ ರೈತರು ಇ- ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಒಟಿಪಿ ಆಧಾರಿತ ಇ- ಕೆವೈಸಿಯನ್ನು (E- KYC)ಪಿಎಂ ಕಿಸಾನ್ ಪೋರ್ಟಲ್ ಇಲ್ಲವೇ ಹತ್ತಿರದ ಸಿಎಸ್ಸಿ ಕೇಂದ್ರದಲ್ಲಿ ಕೂಡ ಮಾಡಬಹುದು.ಪಿಎಂ ಕಿಸಾನ್ ಯೋಜನೆಯ 14 ನೇ ಕಂತು ಜುಲೈನಲ್ಲಿ ಬಿಡುಗಡೆಯಾಗಿದ್ದು, ಈಗ 15 ಕಂತು ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೆಚ್ಚಿದೆ. ಈ ಪರಿಸ್ಥಿತಿಯಲ್ಲಿ ಯೋಜನೆಯಡಿ ಇನ್ನೂ ಇ-ಕೆವೈಸಿ ಪ್ರಕ್ರಿಯೆ ಆಗದೇ ಇರುವ ರೈತರು ಆದಷ್ಟು ಬೇಗ ಮುಗಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ: Belthangady: ಕ್ಷುಲ್ಲಕ ವಿಚಾರಕ್ಕೆ ತಂದೆ -ಮಗನ ನಡುವೆ ಕಲಹ: ತಂದೆಯಿಂದಲೇ ಮಗನ ಹತ್ಯೆ !
