Home » MGNREGA: ನರೇಗಾ ಹೆಸರು ಬದಲು: ಕೇಂದ್ರ ಸರ್ಕಾರ ಅನುಮೋದನೆ

MGNREGA: ನರೇಗಾ ಹೆಸರು ಬದಲು: ಕೇಂದ್ರ ಸರ್ಕಾರ ಅನುಮೋದನೆ

0 comments

MGNREGA: ಮನ್ರೇಗಾ (MGNREGA) ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆ. ʻಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆʼಯಾಗಿ (Pujya Bapu Gramin Rozgar Guarantee Yojana) ಮರು ನಾಮಕರಣ ಮಾಡಲಾಗಿದೆ.

ಈ ಯೋಜನೆ ಅಡಿಯಲ್ಲಿ ಕನಿಷ್ಠ ಉದ್ಯೋಗ ದಿನಗಳ ಸಂಖ್ಯೆಯನ್ನು ಸರ್ಕಾರ 125 ದಿನಗಳಿಗೆ ಹೆಚ್ಚಿಸಿದೆ. ಅಲ್ಲದೇ ಕನಿಷ್ಠ ವೇತನ ದಿನಕ್ಕೆ 240 ರೂ.ಗೆ ಪರಿಷ್ಕರಿಸಲಾಗಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟದಲ್ಲಿ 2027ರ ಜನಗಣತಿಗಾಗಿ 11,718 ಕೋಟಿ ರೂ.ಗಳ ಅನುಮೋದನೆ ನೀಡಿದೆ.

2 ಹಂತಗಳಲ್ಲಿ ಜನಗಣತಿ ನಡೆಯಲಿದ್ದು, ಏಪ್ರಿಲ್ ಮತ್ತು ಸೆಪ್ಟೆಂಬರ್ 2026 ರ ನಡುವೆ ಮನೆ ಪಟ್ಟಿ ಮಾಡಲಾಗುತ್ತೆ. ಫೆಬ್ರವರಿ 2027 ರಲ್ಲಿ ಜನಸಂಖ್ಯಾ ಎಣಿಕೆ ನಡೆಸಲಾಗುತ್ತೆ. ಭಾರತದ ಪರಮಾಣು ವಿದ್ಯುತ್ ವಲಯವು ಪ್ರಮುಖ ಪರಿವರ್ತನೆಗೆ ಸಜ್ಜಾಗಿದೆ. ಕೇಂದ್ರ ಸಚಿವ ಸಂಪುಟವು `ಶಾಂತಿ’ ಪರಮಾಣು ಶಕ್ತಿ ಮಸೂದೆ 2025 ಅನ್ನು ಅನುಮೋದಿಸಿದೆ. ಈ ಮಹತ್ವದ ಶಾಸನವು ಖಾಸಗಿ ಕಂಪನಿಗಳಿಗೆ ಪರಮಾಣು ವಿದ್ಯುತ್‌ನಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.

You may also like