PM KISAN 13th Installment : ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಇದೀಗ 13ನೇ ಕಂತಿಗಾಗಿ(PM KISAN 13th Installment) ರೈತರು ಎದುರು ನೋಡುತ್ತಿದ್ದವರಿಗೆ ಶುಭ ಸುದ್ದಿ ಲಭಿಸಿದೆ. ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 27ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ (PM Kisan)ರೈತರಿಗೆ ಪಿಎಂ ಕಿಸಾನ್ ಹೋಳಿ ಹಬ್ಬಕ್ಕೂ ಮುನ್ನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ.
ಕರ್ನಾಟಕ ರಾಜ್ಯದ ಬೆಳಗಾವಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಿಎಂ ಕಿಸಾನ್ ನಿಧಿಯ 13ನೇ ಕಂತು ಬಿಡುಗಡೆ ಮಾಡಿದ್ದು, ಪ್ರಧಾನಿ ಮೋದಿ ರೈತರ ಖಾತೆಗೆ ಬರೋಬ್ಬರಿ 16,800 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದಾರೆ. . ಆದರೆ ನಿಮ್ಮ ಖಾತೆಗೆ ಇನ್ನೂ ಹಣ ಜಮೆಯಾಗಿಲ್ಲವೇ? ಹಾಗಿದ್ರೆ, ಈ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.
ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಆರ್ಥಿಕ ನೆರವು ಪಡೆಯಲು ಇ- ಕೆವೈಸಿ( E – KYC)ಕಡ್ಡಾಯಗೊಳಿದ್ದು ಗೊತ್ತಿರುವ ವಿಚಾರವೇ!!! ಆದರೆ, ಈ ನಡುವೆ ಇ-ಕೆವೈಸಿ ಮಾಡಿಸಲು ಬಾಕಿ ಇರುವ ರೈತರು ಶೀಘ್ರದಲ್ಲೇ ಮಾಡಿಸಿಕೊಳ್ಳಲು ಮನವಿ ಮಾಡಲಾಗಿದೆ.ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಲು ಅಡಚಣೆ ಉಂಟಾಗಿದೆ ಆರ್ಥಿಕ ನೆರವನ್ನು ಪಡೆಯಲು ಸಾಧ್ಯವಾಗದ ಹಾಗೂ ಖಾತೆಗೆ ಹಣ ವರ್ಗಾವಣೆಯಾಗದ ರೈತರು (Farmers)ತಮ್ಮ ಬ್ಯಾಂಕ್ ಶಾಖೆಗಳನ್ನು(Bank) ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಲು ಮನವಿ ಮಾಡಲಾಗಿದೆ.
ಒಂದು ವೇಳೆ, ನೀವು ಆನ್ಲೈನ್ ಮೂಲಕ ಕೆವೈಸಿ ಮಾಡಿಕೊಳ್ಳದೆ ಇದ್ದಲ್ಲಿ ನಿಮಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಮೊತ್ತ ಜಮೆಯಾಗುವುದು ಅನುಮಾನ. ಆದರೆ ನೀವು ಕೆವೈಸಿ ಮಾಡಿದ್ದರೂ ಕೂಡಾ ನಿಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಮೊತ್ತ(PM KISAN 13th Installment ) ಲಭ್ಯವಾಗಿಲ್ಲ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನೀವು ಆನ್ಲೈನ್ ಮೂಲಕ ಹೀಗೆ ದೂರು ಸಲ್ಲಿಸಿ ಆನಂತರ ಹಣ ಬಂದಿದೆಯೇ ಎಂದು ಪರಿಶೀಲನೆ ನಡೆಸುವುದು ಒಳ್ಳೆಯದು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿಯಲ್ಲಿ ಅರ್ಹ ರೈತರುಗಳು ವಾರ್ಷಿಕವಾಗಿ 6 ಸಾವಿರ ರೂಪಾಯಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರೈತರು ಮೂರು ಕಂತುಗಳಲ್ಲಿ ಎರಡು ಸಾವಿರ ರೂಪಾಯಿಯಂತೆ ಒಟ್ಟು ಆರು ಸಾವಿರ ರೂಪಾಯಿ ಪಡೆಯಲಿದ್ದು, ಇದು ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ.
ಪಿಎಂ ಕಿಸಾನ್ ನಿಧಿಯ ಮೊತ್ತ ಲಭ್ಯವಾಗಬೇಕಾದರೆ ನೀವು ಕೆವೈಸಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ನೀವು ಈ ವಿಧಾನ ಅನುಸರಿಸಿ ದೂರು ಸಲ್ಲಿಸಿ. ಮೊದಲು PM ಕಿಸಾನ್ ವೆಬ್ಸೈಟ್ www.pmkisan.gov.in ಗೆ ಭೇಟಿ ನೀಡಬೇಕು. ನಂತರ, Farmers Corner ಮೇಲೆ ಕ್ಲಿಕ್ ಮಾಡಿಕೊಂಡು , ಬಳಿಕ Beneficiary Status ಮೇಲೆ ಕ್ಲಿಕ್ ಮಾಡಬೇಕು. ನಂತರದ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಬೇಕಾಗಿದ್ದು, ಆಗ ನೀವು ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.
ಹಣ ಬಂದಿಲ್ಲದಿದ್ದರೆ ದೂರು ನೀಡುವುದು ಹೇಗೆ?
ನಿಮಗೆ ಈ ಹಿಂದಿನ ಕಂತಿನ ಹಣ ಜಮೆ ಆಗಿಲ್ಲ ಎಂದಾದರೆ, ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ – 011-24300606 ಇಲ್ಲವೇ 155261 ಕರೆ ಮಾಡಬಹುದಾಗಿದೆ. ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಕ್ಕೂ ಕರೆ ಮಾಡಬಹುದಾಗಿದೆ. ಇದರ ಜೊತೆಗೆ ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿಗೆ ಹಣ ಲಭ್ಯವಾಗದ ಬಗ್ಗೆ ಕಾರಣ ಕೇಳಬಹುದು. ಇಮೇಲ್ ಮಾಡಲು PMkisan-ict@gov.in ಗೆ ಮೇಲ್ ಮಾಡುವ ಇಲ್ಲವೇ pmkisan-funds@gov.in ಮೇಲ್ ಮಾಡುವ ಮೂಲಕ ಮಾಹಿತಿ ಪಡೆಯಬಹುದು.
