Home » Mangaluru: ನಗರದಲ್ಲೊಂದು ವಿಚಿತ್ರ ಘಟನೆ; ಮೊಬೈಲ್‌ ಟವರ್‌ ಸಹಿತ ಉಪಕರಣಗಳ ಕಳವು

Mangaluru: ನಗರದಲ್ಲೊಂದು ವಿಚಿತ್ರ ಘಟನೆ; ಮೊಬೈಲ್‌ ಟವರ್‌ ಸಹಿತ ಉಪಕರಣಗಳ ಕಳವು

0 comments

Mangaluru: ಮಂಗಳೂರು ತಾಲೂಕಿನಲ್ಲಿ ತಿರುವೈಲ್‌ ಗ್ರಾಮವೊಂದರಲ್ಲಿ ನಿರ್ಮಿಸಲಾಗಿದ್ದ ಮೊಬೈಲ್‌ ಟವರನ್ನು ಉಪಕರಣಗಳ ಸಹಿತ ಕಳವು ಮಾಡಿರುವ ಘಟನೆಯೊಂದು ವರದಿಯಾಗಿದೆ. ಜಿ.ಟಿ.ಎಲ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಲಿ.ನವರು ಇವರು ಟವರ್‌ ನಿರ್ಮಾಣ ಮಾಡಿದ್ದರು.

ಮುಂಬಯಿನ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಇವರು, ಇತ್ತೀಚೆಗೆ ಟವರ್‌ನ ಪರಿಶೀಲನೆಗೆಂದು ಸ್ಥಳಕ್ಕೆ ಭೇಟಿ ನೀಡಿದ್ದು, ಮೊಬೈಲ್‌ ಟವರ್‌ ಮತ್ತು ಟವರ್‌ನ ಉಪಕರಣಗಳು ಸೇರಿ ಒಟ್ಟು 19 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ತಿಳಿದು ಬಂದಿದೆ.

ಇದೀಗ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ಮುಂದುವರಿದಿದೆ.

You may also like

Leave a Comment