1
ಕಡಬ: ಕಡಬ ತಾಲೂಕು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕಲ್ಯಾಣ ಮಂಟಪದ ಭೂಮಿ ಪೂಜೆ ಸೋಮವಾರ ನಡೆಯಿತು.
ದೇವಳದ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ವೈದಿಕ ವಿಧಾನ ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಸದಸ್ಯರಾದ ಮುರಳಿಕೃಷ್ಣ ಬಡಿಲ, ಶ್ರೀರಾಮ, ಸಂಜೀವ ಗೌಡ ಕೊನೆಮಜಲು, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಬುಡಲೂರು, ಕಾರ್ಯದರ್ಶಿ ವಿನೋದ್ ಪಲ್ಲಡ್ಕ, ಉದ್ಯಮಿ ಕೇಶವ ಅಮೈ ಮೊದಲಾದವರು ಇದ್ದರು.
