Home » ಸುಳ್ಯ : ಸರ್ಕಾರಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ | ನಾಲ್ವರು ಆಸ್ಪತ್ರೆಗೆ ದಾಖಲು

ಸುಳ್ಯ : ಸರ್ಕಾರಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ | ನಾಲ್ವರು ಆಸ್ಪತ್ರೆಗೆ ದಾಖಲು

0 comments

ಸುಳ್ಯ: ಇಲ್ಲಿನ ಕಲ್ಲುಗುಂಡಿ ಸಮೀಪದ ಕಡಪಾಲ ಸೇತುವೆ ಸಮೀಪದಲ್ಲಿ ಲಾರಿಯೊಂದು ಸರ್ಕಾರಿ ಬಸ್ ಗೆ ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಕುರಿತು ಮಾಹಿತಿ ನೀಡಿದ ಪ್ರಯಾಣಿಕರು, ಮೈಸೂರಿನಿಂದ ಪುತ್ತೂರಿಗೆ ಬರುತ್ತಿದ್ದ ಬಸ್ ಗೆ ಲಾರಿ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓವ೯ ಪ್ರಯಾಣಿಕ ಬಸ್ಸಿನ ಒಳಗೆ ಸಿಲುಕಿದ್ದು, ಸೀಟ್ ನ ರಾಡ್ ತುಂಡರಿಸಿ ಅವರನ್ನು ಹೊರ ತೆಗೆಯಲಾಗಿದೆ.
ಹೆಚ್ಚಿನ ಮಾಹಿತಿ ದೊರೆತಿಲ್ಲ.

You may also like

Leave a Comment