Home » ಆಲಂಕಾರು : ಕ್ಯಾಂಪ್ಕೋ ಸಂಸ್ಥೆಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರ

ಆಲಂಕಾರು : ಕ್ಯಾಂಪ್ಕೋ ಸಂಸ್ಥೆಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರ

by Praveen Chennavara
0 comments

ಕ್ಯಾಂಪ್ಕೋ ಸಂಸ್ಥೆ , ಮಂಗಳೂರು ಇದರ ವತಿಯಿಂದ “ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ” ಎಂಬ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ಜೂ. 3ರಂದು ಆಲಂಕಾರು ಕ್ಯಾಂಪ್ಕೋ ಶಾಖೆಯಲ್ಲಿ ನಡೆಯಿತು.

ಕ್ಯಾಂಪ್ಕೋ ಸದಸ್ಯರಾದ ಶಶಿಧರ ರೈ ಮನವಳಿಕೆ ಇವರ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗಾಗಿ ಕ್ಯಾಂಪ್ಕೋ ವತಿಯಿಂದ ನೀಡಲಾದ ರೂ. 50,000/- ಚೆಕ್ ನ್ನು ಸಂಸ್ಥೆಯ ನಿರ್ದೇಶಕ ಶ್ರೀ ಕೃಷ್ಣ ಪ್ರಸಾದ್ ಮಡ್ತಿಲ ಅವರು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಹಾಗೂ ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್ ಖಂಡಿಗೆ ಇವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಮಹೇಶ್ ಚೌಟ, ರಾಘವೇಂದ್ರ ಭಟ್ ಕೆದಿಲ, ಮಹಾ ಪ್ರಬಂಧಕರಾದ ರೇಷ್ಮ ಮಲ್ಯ, ಮುಖ್ಯ ಮಾರುಕಟ್ಟೆ ವ್ಯವಸ್ಥಾಪಕರಾದ ಶ್ರೀ ಗೋವಿಂದ ಭಟ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳಾದ ಪ್ರಶಾಂತ್ ರೈ, ಕ್ಯಾಂಪ್ಕೋ ಅಲಂಕಾರು ಶಾಖೆಯ ಶಾಖಾಧಿಕಾರಿ ಶ್ರೀ ಉದಯ ಬಿ ಆರ್ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಸದಸ್ಯ ಬೆಳೆಗಾರರು ಉಪಸ್ಥಿತರಿದ್ದರು.

You may also like

Leave a Comment