Moodabidre: ಮುಲ್ಕಿ ಮೂಡುಬಿದಿರೆ ಹಿಂದೂ ಜಾಗರಣ ವೇದಿಕೆಯ ಮುಖಂಡರೊಬ್ಬರ ಮೊಬೈಲ್‌ಫೋನ್‌ನಲ್ಲಿ ಕಂಡು ಬಂದ 50 ಅಶ್ಲೀಲ ವೀಡಿಯೋಗಳ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.
ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್‌ರಾಜ್ ಧರೆಗುಡ್ಡ ವಿರುದ್ಧ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.
2024 ರಲ್ಲಿ ಮೂಡುಬಿದಿರೆ ತಾಲೂಕಿನ ಮಿಜಾರು ಬಳಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ನಡೆದ ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನದ ಅಪಘಾತದಲ್ಲಿ ಗಾಯಗೊಂಡಿದ್ದ ಸುಮಿತ್ರಾ ಮತ್ತು ಅವರ ಪುತ್ರಿ ಸಾನ್ವಿಗೆ ಸಮಿತ್ ರಾಜ್, ಬಸ್ ಮಾಲೀಕರ ಮೇಲೆ ಒತ್ತಡ ಹೇರಿ ಐದು ಲಕ್ಷ ಪರಿಹಾರ ಪಡೆದು ಕೊಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಖಾಸಗಿ ಬಸ್ ಮಾಲಿಕರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದರು.
ಜೂನ್ 26 ರಂದು ಪೊಲೀಸರು ಆರೋಪಿ ಸಮಿತ್ ರಾಜ್ ದರೆಗುಡ್ಡಯನ್ನು ಬಂಧನ ಮಾಡಿ ಠಾಣೆಗೆ ಕರೆತಂದಿದ್ದರು. ಸಮಿತ್ ರಾಜ್‌ನ ಮೊಬೈಲನ್ನು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಸೆನ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈ ವೇಳೆ ಆರೊಪಿ ಸುಮಿತ್‌ರಾಜ್ ಮಹಿಳೆ ಜೊತೆ ಇರುವ ಅಶ್ಲೀಲ ವೀಡಿಯೋಗಳು ಮತ್ತು ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಲಾಗಿರುವ ಸುಮಾರು 40 ರಿಂದ 50 ಅಶ್ಲೀಲ ವೀಡಿಯೋಗಳು ಪತ್ತೆಯಾಗಿರುವ ಕುರಿತು ಪೊಲೀಸರು ತಿಳಿಸಿರುವ ಕುರಿತು ವರದಿಯಾಗಿದೆ.
ಹಾಗಾಗಿ ಈ ವೀಡಿಯೋಗಳನ್ನು ಹರಡುವ, ಇತರರಿಗೆ ಕಳುಹಿಸುವ ಮೂಲಕ ಸಾಮಾಜಿಕ ಸೌಹಾರ್ದತೆಗೆ ಭಂಗ ತರವು ಸಾಧ್ಯತೆ ಇದೆ ಎಂಬ ಆಧಾರದಲ್ಲಿ ಮೂಡುಬಿದಿರೆ ಪೊಲೀಸ್ ನಿರೀಕ್ಷಕರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲು ಮಾಡಲಾಗಿರುವ ಕುರಿತು ವರದಿಯಾಗಿದೆ.
