Home » ಬೆಳ್ಳಾರೆಯಲ್ಲಿ‌ ಪೊಲೀಸ್ ಲಾಠಿಚಾರ್ಜ್ ನಿಂದ ಗಾಯಗೊಂಡ ರಮೇಶ್ ಮನೆಗೆ ಸಚಿವ ಎಸ್ ಅಂಗಾರ ಭೇಟಿ

ಬೆಳ್ಳಾರೆಯಲ್ಲಿ‌ ಪೊಲೀಸ್ ಲಾಠಿಚಾರ್ಜ್ ನಿಂದ ಗಾಯಗೊಂಡ ರಮೇಶ್ ಮನೆಗೆ ಸಚಿವ ಎಸ್ ಅಂಗಾರ ಭೇಟಿ

by Praveen Chennavara
0 comments

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬೆಳ್ಳಾರೆಯ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ರವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ದಿನಾಂಕ 27 ರಂದು ನಡೆದ ಲಾಠಿಚಾರ್ಜ್ ವೇಳೆ ಗಾಯಗೊಂಡ ಕಾಸರಗೋಡು ನಗರಸಭೆಯ ವಿಪಕ್ಷ ನಾಯಕ ‘ಹುಬ್ಬಳ್ಳಿ ರಮೇಶ್’ ಖ್ಯಾತಿಯ ಪಿ.ರಮೇಶ ರವರ ಮನೆಗೆ ಸಚಿವರಾದ ಎಸ್.ಅಂಗಾರರವರು ತೆರಳಿ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ಸುಬೋಧ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ದ.ಕ. ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಮಾಜಿ ಜಿ.ಪಂ. ಅಧ್ಯಕ್ಷ , ಗುತ್ತಿಗಾರು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮತ್ತು ಇತರರು ಉಪಸ್ಥಿತರಿದ್ದರು.

You may also like

Leave a Comment